Keerthy Sam

ಪ್ರಭು ಯೇಸುಕ್ರಿಸ್ತನಲ್ಲಿ ಒಲವಿನ ಸ್ನೇಹಿತರೆ,

ಕನ್ನಡ ಕ್ರೈಸ್ತ ಭಕ್ತಿಗೀತೆಗಳ ಭಂಡಾರ ಶ್ರೀಮಂತವಾದುದು. ತಮ್ಮ ಸುಶ್ರಾವ್ಯ ಸಂಗೀತ, ಸಂಯೋಜನೆ ಹಾಗು ಅರ್ಥಗರ್ಭಿತ ಸಾಹಿತ್ಯದೊಂದಿಗೆ ಈ ಗೀತೆಗಳು ಮನೆಮಾತಾಗಿ ಮಾತ್ರವಲ್ಲದೆ ಕೇಳುಗರ ಮನದ ಮಾತಾಗಿ ನೆಲೆಗೊಂಡಿದೆ.
ಇಂತಹ ಕೆಲವು ಹೊಸ ಗೀತೆಗಳೊಂದಿಗೆ ಹಲವಾರು ಹಳೆಯ ಗೀತೆಗಳನ್ನು ಅವು ಮರೆಯಾಗುವ ಮುನ್ನ ಅಮರವಾಗಿಸುವ ಚಿಕ್ಕ ಪ್ರಯತ್ನವೇ ಈ ಅಂತರ್ಜಾಲ ತಾಣ.
ಎಲ್ಲಕ್ಕಿಂತ ಮಿಗಿಲಾಗಿ ಈ ಹಾಡುಗಳು ದಯಾಮಯ ದೇವರನ್ನು ಸ್ಮರಿಸಲು ಸ್ತುತಿಸಲು ಸಹಾಯಕವಾಗುವ ಪುಟ್ಟ ಸಾಧನವಾಗಲಿ.
ಈ ಹಾಡುಗಳನ್ನು ಕೇಳಿ ನಿಮ್ಮ ಅಂತರಂಗ ನಲಿಯಲಿ ಯೇಸುವೇ ಸ್ತೋತ್ರ ಎನ್ನಲಿ.

ಪ್ರಾರ್ಥನೆ :
ಸರ್ವೇಶ್ವರ ಕರುಣೆಯ ಮಹಾಸಾಗರನೇ, ಈ ಹಾಡುಗಳನ್ನು ರಚಿಸಿದ, ಸಂಯೋಜಿಸಿ, ಹಾಡಿದ ಎಲ್ಲರನ್ನು ಹರಸು, ಕೇಳುವ ನಮ್ಮೆಲ್ಲರನ್ನೂ ಹರಸು ನಿಮ್ಮ ಅನಂತ ದಯೆಯನ್ನು ನಮ್ಮ ಮೇಲಿರಿಸು. ನಿನ್ನ ಪರಿಶುದ್ಧ ನಾಮ ಜಗದೆಲ್ಲೆಡೆಯಲ್ಲೂ ಆರಾಧಿಸಲ್ಪಡಲಿ. ಅಮೆನ್.