SS Nature Cure

ಬೆಂಗಳೂರಿನ ಸ್ವಯಂ ಸ್ವಾಸ್ಥ್ಯ ನೇಚರ್‌ ಕ್ಯೂರ್‌ ಫೌಂಡೇಶನ್‌ (ರಿ.) ನ ಪ್ರಕೃತಿ ಚಿಕಿತ್ಸೆ ಅರಿವು-ನೆರವು ಎಂಬ ಅಭಿಯಾನದ ಭಾಗವಾಗಿ ಈ ಸಾಮಾಜಿಕ ಮಾಧ್ಯಮ ಕಾರ್ಯ ನಿರ್ವಹಿಸುತ್ತಿದೆ. ಔಷಧ ರಹಿತ, ನೈಜ ಪ್ರಕೃತಿ ಚಿಕಿತ್ಸೆ(Nature Cure) ವಿಧಾನದಲ್ಲಿ ಬದುಕುವ ಬಗ್ಗೆ, ಆಹಾರ ಕ್ರಮ ಹಾಗೂ ಯೋಗ ಕ್ರಿಯೆಗಳಿಂದ ಆರೋಗ್ಯ ಗುಣಮಟ್ಟ ವೃದ್ಧಿ, ಆಧುನಿಕ ಜೀವನ ಶೈಲಿಯಿಂದ ಉದ್ಭವಿಸಿರುವ ಆರೋಗ್ಯ ಸಮಸ್ಯೆಗಳ ನಿವಾರಣೆ ಹಾಗೂ ಮಾನಸಿಕ ಸುಸ್ಥಿತಿ ಸೇರಿದಂತೆ ಸಂಪೂರ್ಣ ಆರೋಗ್ಯ ಸಾಧನೆಗೆ ವಿಚಾರ ವಿನಿಮಯ ವೇದಿಕೆಯಾಗಿದೆ.