Yesuvina Shilubeli ಯೇಸುವಿನ ಶಿಲುಬೆಲಿ-Kannada Lent Worship Song Stuthi@StAndrews @Sawday Church Mysuru
Автор: Stuthi StAndrews
Загружено: 2025-03-27
Просмотров: 1548
Yesuvina Shilubeli ಯೇಸುವಿನ ಶಿಲುಬೆಲಿ
We are thankful that that our Kannada Choir Stuthi@StAndrews was invited to sing at Rev Sawday Memorial Church at Mysuru on 09 Mar 2025. We sang four special songs including this at the Morning Service.
ಯೇಸುವಿನ ಶಿಲುಬೆಯಲ್ಲಿ ಹೆಚ್ಚಳ ಪಡುವೆ
ನನ್ನ ಕರ್ತನೊಂದಿಗೆ ಕ್ರೂಜಿಸಲ್ಪಟ್ಟಿರುವೆ
ಈ ಭಕ್ತಿಗೀತೆ ನಮ್ಮ ವಿಶ್ವಾಸದ ಆಳವನ್ನು ಹಾಗೂ ಯೇಸುವಿನ ಶಿಲುಬೆಯ ಮಹತ್ವವನ್ನು ಸ್ಮರಿಸಲು ಪ್ರೇರೇಪಿಸುತ್ತದೆ. ಇದು ಲೋಕದ ಆಶೆಗಳ ವಿರುದ್ಧ ಕ್ರಿಸ್ತನಿಗಾಗಿ ಬದುಕುವ ಸಂಕಲ್ಪವನ್ನು ಪ್ರತಿಪಾದಿಸುತ್ತದೆ.
ಈ ಗೀತೆ ಹಾಸನದ ಶ್ರೀ ಐಸಾಕ್ ಕರುಣಾಕರ್ ಅವರಿಂದ ರಚಿಸಲಾಯಿತು. ಕನ್ನಡ ಕ್ರೈಸ್ತ ಸಂಗೀತ ಕ್ಷೇತ್ರಕ್ಕೆ ಅವರ ಅಪಾರ ಕೊಡುಗೆಗಳಲ್ಲಿ ಈ ಗೀತೆಯೂ ಸೇರಿದೆ. ಇವರ ಮಕ್ಕಳು ಬೆನ್ನಿ ಮತ್ತು ಸುಜಯ್ ಇಂದು ಸ್ತುತಿಯ ಭಾಗವಾಗಿದ್ದಾರೆ ಎಂದು ಹೇಳಲು ಸಂತೋಷಿಸುತ್ತೇವೆ.
ಈ ಹಾಡನ್ನು ಮೊತ್ತ ಮೊದಲ ಬಾರಿಗೆ ಬಹಿರಂಗ ಪಡಿಸುವ ಮತ್ತು ಕೇಳುವ ಈ ಸದವಕಾಶ ನಮ್ಮೆಲ್ಲರದಾಗಿದೆ ಎಂದು ತಿಳಿಸಲು ಸ್ತುತಿಯು ಸಂತೋಷಿಸುತ್ತಿದೆ. ಸ್ತುತಿ ಇಂದು ಈ ಹಾಡಿನ 1, 2 ಮತ್ತು 5ನೇ ಚರಣಗಳನ್ನು ಮಾತ್ರ ಹಾಡುತ್ತಿದೆ.
ಈ ಹಾಡನ್ನು ಕೇಳುತ್ತಾ ಶಿಲುಬೆಯಲ್ಲಿರುವ ಪಾಪ ವಿಮೋಚನೆ, ವಿಜಯ, ಮತ್ತು ಆತನ ಪ್ರೀತಿಯ ಬಗ್ಗೆ ಮನನ ಮಾಡೋಣ.
Special Note:
Most of us have grown up singing or listening to these songs since 3-4 decades.
''ನಿನ್ನ ಸಾನಿಧ್ಯಕ್ಕೆ ನನ್ನನ್ನು ಸೇರಿಸು'',
“ಕರ್ತ ನಿನ್ನ ಪ್ರೀತಿಸುವೆನು ನನ್ನ ಪ್ರಾಣ ಪ್ರಿಯನೆ''
“ನಾ ನಿನ್ನ ಕಣ್ಣಂತೆ ಅಮೂಲ್ಯನೇ”
“ನಿನ್ ಭೂಯಾತ್ರೆಯ ಚಿಂತೆಯನು
In fact he top three were part of the very first and second DVD albums of Stuthi released in 2010 and 2012.
We came to know that it was written by Mr Karunkara Isaac only after his two sons, Benny and Sujay became members of Stuthi.
We learnt this song thanks to their aunt and planned the first rendering at Mysuru on 09th Mar 2025. We had practiced the previous day (8th Mar) with sound check along with Benny and Sujay accompanying this song on Bass and Rhythm guitars respectively. We were planning to send the recording to Mr Karunakara for his listening too.! However Mr Karunakara went to be with the Lord the very next morning, before we could render this song and the children had to leave for Hasan in the morning! Disappointing, but we cannot ask why!
ಯೇಸುವಿನ ಶಿಲುಬೆಲಿ ಹೆಚ್ಚಳ ಪಡುವೆ
ನನ್ನ ಕರ್ತನೊಂದಿಗೆ ಕ್ರೂಜಿಸಲ್ಪಟ್ಟಿರುವೆ
1.ಲೋಕದ ಪಾಲಿಗೆ ನಾ ಸತ್ತು ಹೋಗಿರುವೆ
ಲೋಕವು ಸತ್ತಿದೆ ನನ್ನ ಪಾಲಿಗೆ
ಪೂರ್ಣ ಬಿಡುಗಡೆ ಯೇಸುವಿನಲ್ಲಿದೆ
ಆತನ ಮೂಲಕವೇ ಕ್ರೂಜಿಸಲ್ಪಟ್ಟಿರುವೆ
2. ಇನ್ನು ನಾನು ಲೋಕವ ಪ್ರೀತಿಸಲಾರೆನು
ಲೋಕವು ನನ್ನನ್ನು ದ್ವೇಷಿಸುವದು
ನನ್ನನ್ನು ಯೇಸುವು ಪ್ರೀತಿಸುತ್ತಿರುವನು
ತನ್ನನ್ನೇ ನನಗಾಗಿ ಒಪ್ಪಿಸಿಕೊಟ್ಟನು
3.ಐಕ್ಯವಾಗಿ ಇರುವೆ ಯೇಸುವಿನಲ್ಲಿಯೇ
ಪಾಪವಿನ್ನು ಆಳದು ನನ್ನ ಮೇಲೆಯೇ
ಪೂರ್ವ ಸ್ವಭಾವವು ಕ್ರೂಜಿಸಲ್ಪಟ್ಟಿದೆ
ಪಾಪದ ವಶದಿಂದ ಬಿಡಿಸಲ್ಪಟ್ಟರುವೆ.
4.ದೇವರ ಬಲದಿಂದ ಜೀವಿಸುತ್ತಿರುವೆ
ಪುನರುತ್ಥಾನಶಕ್ತಿಯ ತಿಳಿಯುತ್ತಿರುವೆ
ಆ ಅನುಭವವೇ ನನ್ನ ಬಯಕೆ
ಯೇಸು ಮಾತ್ರವೇ ಕೊಡುವನಲ್ಲವೆ
5.ಯೇಸುವಿನ ಶಿಲುಬೆಯಲಿ ಪೂರ್ಣ ಜಯವಿದೆ
ವೈರಿಯು ಸೋತನು ಕ್ರೂಜೆ ಬುಡದಲ್ಲೇ
ವೈರಿಯ ಜೈಸಿರುವೆ ಕರ್ತನಿಂದಲೇ
ಲೋಕವ ಜೈಸಿರುವ ಯೇಸುವಿನಿಂದಲೇ
ISAAC KARUNAKAR D
|:Yēsuvina| śilubeli| heccaḷa paḍu|ve…|
nanna karta|nondige| krūjisalpaṭṭiru| ve…:|
1. |:Lōkada| pālige| nā sattu hōgiru|ve…|
lōkavu| sattide| nanna pāli|ge…:|
Pūrṇa biḍuga|ḍe| yēsuvinalli|de|
ātana mūlaka|vē| krūjisalpaṭṭiru|ve|
2. |:Innu nānu| lōkava| prītisalāre|nu…|
lōkavu| nannannu| dvēṣisuva|du…:|
Nannannu| yēsuvu| prītisuttiruva|nu…|
tannannē| nanagāgi| oppisikoṭṭa|nu…|
5. |:Yēsuvina| śilubeli| pūrṇa jayavi|de
vairiyu| sōtanu| krūje buḍada|llē…:|
Vairiya| jaisiruve| kartaninda|lē…|
lōkava| jaisiruva| yēsuvininda|lē…|
Other stanzas not sung today
3. |:Aikyavāgi iruve yēsuvinalliyē…|
pāpavinnu āḷadu nanna mēleyē…:|
Pūrva svabhāvavu krūjisalpaṭṭide…|
pāpada vaśadinda biḍisalpaṭṭaruve.…|
4. |:Dēvara baladinda jīvisuttiruve
punarut'thānaśaktiya tiḷiyuttiruve…:|
Ā anubhavavē nanna bayake…|
yēsu mātravē koḍuvanallave…|
ISAAC KARUNAKAR D
Доступные форматы для скачивания:
Скачать видео mp4
-
Информация по загрузке: