Paraloka Thandeye ಪರಲೋಕ ತಂದೆಯೇ Lords Prayer as song- Kannada Christian Devotional- Stuthi@StAndrews
Автор: Stuthi StAndrews
Загружено: 2025-08-24
Просмотров: 5077
Paraloka Thandeye ಪರಲೋಕ ತಂದೆಯೇ Lords Prayer as song- Kannada Christian Devotional by Stuthi@stuthistandrews3577 for Kannada Worship Service on 24 Aug 2025
Thanks to Nixson for recording this Video!
Ch:ಪರಲೋಕ ತಂದೆಯೇ , ನಿನ್ನ ನಾಮ ಎಂದಿಗೂ
ಪರಿಶುದ್ಧವಾಗಲಿ ರಾಜ್ಯ ಬರಲಿ, ರಾಜ್ಯ ಬರಲಿ
1.ಪರಲೋಕದಲ್ಲಿಯೂ ನಿನ್ನ ಚಿತ್ತದಂತೆಯೇ
ಭೂಲೋಕದಲ್ಲಿಯೂ ನೆರವೇರಲಿ
ಅನುದಿನದಾಹಾರವ ನೀ ನೀಡುವಂತೆಯೇ
ಈ ಹೊತ್ತು ನಮಗೂ ದಯಪಾಲಿಸು, ದಯಪಾಲಿಸು
2.ತಪ್ಪು ಮಾಡಿದವರನ್ನು ನಾವು ಕ್ಷಮಿಸುವಂತೆಯೇ
ನಮ್ಮ ತಪ್ಪುಗಳನ್ನು ನೀ ಕ್ಷಮಿಸು
ಶೋಧನೆಯೊಳೆಮ್ಮನ್ನು ಸೇರಿಸದೆ ನಡಿಸು
ಕೇಡಿನ ಹಾದಿಗೆ ನಮ್ಮ ತಪ್ಪಿಸು, ನಮ್ಮ ತಪ್ಪಿಸು
3.ರಾಜ್ಯವು ಬಲವು ಮಹಿಮಾ ಪ್ರಭಾವವು
ಎಂದೆಂದೂ ನಿನ್ನದೇ ಆಗಿರುವುದು
ಘನಮಾನ ಸ್ತೋತ್ರವು ನಿನಗೆ ಉಂಟಾಗಲಿ
ಪರಿಶುದ್ಧ ದೇವರೇ ನಮ್ಮ ತಂದೆಯೇ, ನಮ್ಮ ತಂದೆಯೇ
-Rev Stanly Vinayakumar (Rangayya)
|: Ch: Paraloka Thandeye ninna naama endigu
Parishudhdhavaagali raajya barali,
raajya barali:|
1.Paralokadalliyu ninna chiththadantheye
Bhulokadhalliyu neraverali
Anudhinadhaahaarava nee needuvantheye
Ee hothu namagu dhayapaalisu,
Dhayapaalisu ||Ch||
2.Thappu maadidhavarannu
naavu kshamisuvamtheye
Namma thappugalannu nee kshamisu
Shodhaneyolemmannu serisadhe nadisu
Kedina haadhige namma thappisu,
namma thappisu ||Ch||
3.Raajyavu balavu mahimaa prabhaavavu
Endhendhu ninnadhe aagiruvudhu
Ghanamaana sthothravu ninage untaagali
Parishuddha dhevare namma thandheye,
namma thandheye ||Ch||x2
ಪರಲೋಕ ತಂದೆಯೇ , ನಿನ್ನ ನಾಮ ಎಂದಿಗೂ
ಪರಿಶುದ್ಧವಾಗಲಿ ರಾಜ್ಯ ಬರಲಿ, ರಾಜ್ಯ ಬರಲಿ
ದೇವರ ಮಹಾನ್ ಸೇವಕನಾದ ಘನ ಸ್ಟ್ಯಾನ್ಲಿ ವಿನಯಕುಮಾರ್ ಯವ್ವನ ಪ್ರಾಯದಲ್ಲಿಯೇ ತಮ್ಮ ಜೀವನವನ್ನು ದೇವರಿಗೆ ಅರ್ಪಿಸಿ, ಕ್ರೈಸ್ತ ಭಕ್ತಿಗೀತೆಗಳ ಲೋಕದಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲದಲ್ಲಿ ಅವರು ರಚಿಸಿದ 120 ಕ್ಕೂ ಹೆಚ್ಚು ಕನ್ನಡ ಭಕ್ತಿಗೀತೆಗಳು ಲಕ್ಷಾಂತರ ಹೃದಯಗಳಿಗೆ ಮುಟ್ಟಿವೆ, ಜನರನ್ನು ಪ್ರೇರೇಪಿಸಿವೆ ಮತ್ತು ದೇವರ ಬಳಿಗೆ ಸೆಳೆದಿವೆ.
ಆಳವಾದ ಅರ್ಥ, ಸರಳವಾದ ಭಾಷೆ ಮತ್ತು ಮನಮುಟ್ಟುವ ಸಂಗೀತ ಗಳ ಮೂಲಕ ಅವರ ಗೀತೆಗಳು ಕ್ರೈಸ್ತ ಸಮುದಾಯದ ಪ್ರಾರ್ಥನೆ ಮತ್ತು ಸ್ತುತಿಯ ಅಂಗವಾಗಿವೆ. ಅವರ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಸ್ತುತಿ ಪರಿವಾರದ ಭಾಗವಾಗಿದ್ದಾರೆ ಅಥವಾ ಆಗಿದ್ದರು ಎಂದು ಹೇಳಲು ಸಂತೋಷಿಸುತ್ತೇವೆ.
ಸ್ಟುತಿ@ಸೇಂಟ್ ಆಂಡ್ರ್ಯೂಸ್ ಗಾಯನ ತಂಡವು 2010 ರಿಂದಲೂ ಸ್ಟ್ಯಾನ್ಲಿ ಅಣ್ಣನವರ ಅನೇಕ ಕೀರ್ತನೆಗಳನ್ನು ಸ್ಟುತಿ ಆಲ್ಬಂಗಳಲ್ಲೂ, ಬೇರೆ ಬೇರೆ ಸಭೆ ಮತ್ತು ಕ್ರೈಸ್ತ ಸಂಸ್ಥೆ ಗಳಲ್ಲಿಯೂ ಆರಾಧನಾಕಾಲದ ಸಂಗೀತ ಸೇವೆಯಲ್ಲೂ ಹಾಡುತ್ತ ಬಂದಿದೆ. ಕಳೆದ ವರ್ಷದ ಸ್ತುತಿ ಸಂಜೆಯಲ್ಲಿ ಅವರನ್ನು ಸನ್ಮಾನಿಸಲು ಸ್ತುತಿ ನಿರ್ಧರಿಸಿದ್ದರೂ ಅದಕ್ಕೆ ಮುನ್ನವೇ ಅವರು ಕರ್ತನಲ್ಲಿ ನಿದ್ದೆಹೋದರು.
ಅತಿ ಸುಂದರ ಸಂಗೀತದೊಡನೆ ಅವರಿಂದ ಸಂಯೋಜಿಸಲ್ಪಟ್ಟಿರುವ ನಾವೆಲ್ಲರೂ ಅರಿಕೆ ಮಾಡುವ ಕರ್ತನ ಪ್ರಾರ್ಥನೆಯನ್ನು ನಾವು ಈಗ ಪ್ರಸ್ತುತ ಪಡಿಸುತ್ತೇವೆ.
Доступные форматы для скачивания:
Скачать видео mp4
-
Информация по загрузке: