ಗೀತಪ್ರಣತಿ#98 - ನಿನಗೇನು ಕೊಡುವೆ -ಎಚ್.ಎಸ್.ವೆಂಕಟೇಶ ಮೂರ್ತಿ, ಗಾಯನ – ಶಿಶಿರ ವಿಘ್ನೇಶ್, ಸಂಗೀತ ಚಿದಂಬರ ಕಾಳಮಂಜಿ
Автор: NammaneSangeethaPranathi-ChidambaraKalamanji
Загружено: 2024-02-15
Просмотров: 344
ಗೀತಪ್ರಣತಿ#98 – ನಿನಗೇನು ಕೊಡುವೆ
********
ಕವಿತೆ
ಎಚ್.ಎಸ್.ವೆಂಕಟೇಶ ಮೂರ್ತಿ
ಗಾಯನ
ಶಿಶಿರ ವಿಘ್ನೇಶ್
ಸಂಗೀತ
ಚಿದಂಬರ ಕಾಳಮಂಜಿ
*****
ತನ್ನನ್ನು ಪ್ರೀತಿಸಿದವರಿಗೆ, ಕಾಣಿಕೆ ಕೊಡುವ ಬಯಕೆ, ಕವಿಗೆ
ಆದರೆ ಏನನ್ನು ಕೊಡುವುದು ?
ಆ ಕವಿಯಲ್ಲಿ ಸಂಪತ್ತು (ಧನ, ಕನಕ..ಯಾವುದೇ ವಸ್ತು) ಇಲ್ಲ.
ಆತ ರಚಿಸಿದ ಕವಿತೆ ಮಾತ್ರ ಆತನ ಸಂಪತ್ತು.
ಆದ್ದರಿಂದ ಆತ ಹೇಳ್ತಾನೆ
ನಿನಗೇನು ಕೊಡುವೆ ನಾನು
ಈ ಕವಿತೆಯ ವಿನಾ ?
******
ನಿನಗೇನು ಕೊಡುವೆ ನಾನು
ಈ ಕವಿತೆಯಾ ವಿನಾ
ಉರಿದು ಉರಿದು ಕೊರಗೊ ಹಣತೆ
ಕವಿತೆ ದಿನ ದಿನಾ
ಹಸಿದ ತುಟಿಗೆ ಸವಿನುಡಿ ಹೊಟ್ಟೆ ತುಂಬಿತೇ
ಶಬ್ದ ಅರ್ಥ ಹಾಸು ಹೊಕ್ಕು ಮೈಯ ಮುಚ್ಚಿತೇ
ಶಬ್ದ ತೈಲ ಅರ್ಥ ದೀಪ ಇರುಳು ಹರಿಯಿತೇ
ಕರುಣ ರಸದ ಕೋಡಿ ಕೋಡಿ ದಾಹ ಇಂಗಿತೇ
ಏರು ಹೊಳೆ ಹಾಳೆ ದೋಣಿ
ನಿನ್ನ ತಲುಪಿತೇ ನೀರಿನಲ್ಲಿ ಕರಗದಂತೆ
ಕವಿತೆ ಉಳಿಯಿತೇ ಅರ್ಥ ಛಾಯೆ
ನೆತ್ತಿಗಷ್ಟು ನೆರಳು ನೀಡಿತೇ
ಬೇಯುವೆದೆಗೆ ಕವಿತೆ ಹೊನಲು ತಂಪ ನೀಡಿತೇ
Доступные форматы для скачивания:
Скачать видео mp4
-
Информация по загрузке: