ಸಚಿವ ಸಂಪುಟ ಬದಲಾವಣೆ ಜನವರಿಯಲ್ಲಿ ಸಾಧ್ಯ; ಉಗಾರದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟನೆ.News@UK9/Rajukage MLA
Автор: UK9 NEWS KANNADA LIVE
Загружено: 2025-12-01
Просмотров: 97
ಸಚಿವ ಸಂಪುಟ ಬದಲಾವಣೆ ಜನವರಿಯಲ್ಲಿ ಸಾಧ್ಯ; ಉಗಾರದಲ್ಲಿ ಶಾಸಕ ರಾಜು ಕಾಗೆ ಸ್ಪಷ್ಟನೆ
ಕಾಗವಾಡ:ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಬದಲಾವಣೆಯ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದು, ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಉಗಾರ ಪಟ್ಟಣದಲ್ಲಿ ಮಾತನಾಡಿ ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಯಾವುದೇ ರೀತಿಯ “ಕ್ರಾಂತಿ” ಅಥವಾ ತುರ್ತು ರಾಜಕೀಯ ಬದಲಾವಣೆ ನಡೆಯುವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು, “ಸಚಿವ ಸಂಪುಟ ಬದಲಾವಣೆಯ ವಿಷಯದಲ್ಲಿ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಧಿವೇಶನವೂ ಮುಗಿದಿದೆ. ಜನವರಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ಆಗುವ ಸಾಧ್ಯತೆ ಇದೆ” ಎಂದು ಹೇಳಿದರು.
ಸಚಿವ ಸ್ಥಾನಕ್ಕೆ ತಾವು ಸಹ ಆಕಾಂಕ್ಷಿಯಾಗಿರುವುದನ್ನು ಒಪ್ಪಿಕೊಂಡ ಶಾಸಕ ಕಾಗೆ, “ನನಗೂ ಸಚಿವ ಸ್ಥಾನ ಬೇಕು ಎಂದು ಈಗಾಗಲೇ ಮನವಿ ಸಲ್ಲಿಸಿದ್ದೇನೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಎಲ್ಲಾ ನಿರ್ಧಾರಗಳು ಹೈಕಮಾಂಡ್ ಮಟ್ಟದಲ್ಲೇ ನಡೆಯುತ್ತವೆ; ನಮ್ಮ ವ್ಯಾಪ್ತಿಯಲ್ಲಿ ಏನೂ ಇಲ್ಲ” ಎಂದು ತಿಳಿಸಿದರು.
ಪಕ್ಷದ ಆಂತರಿಕ ಬಣಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಮ್ಮ ಪಕ್ಷದಲ್ಲಿ ಬಣಗಳಿಲ್ಲ. ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಸ್ಪಷ್ಟನೆ ನೀಡಿದರು.
ಇತ್ತೀಚೆಗೆ ತಮ್ಮ ಮತ್ತು ಸವದಿ ಕಾಗೆಯ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತುಗಳಿಗೆ ಉತ್ತರಿಸಿದ ಅವರು, “ನಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆ ಇಲ್ಲ. ನಾವು ಒಟ್ಟಿಗೇ ಇದ್ದೇವೆ” ಎಂದು ಆರೋಪವನ್ನ ತಳ್ಳಿ ಹಾಕಿದರು.
Доступные форматы для скачивания:
Скачать видео mp4
-
Информация по загрузке: