ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy Peruvayi Narayana Shetty)
Автор: ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು (YAKSHARANGA)
Загружено: 2015-08-29
Просмотров: 16442
ತೆಂಕು ಯಕ್ಷರಂಗದ ಕಿರೀಟವೇಷದ ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy of Tenkutittu Yakshagana Peruvayi Narayana Shetty)
ತೆಂಕುತಿಟ್ಟು ಯಕ್ಷಗಾನದ ಪರಂಪರೆಯ ಕಿರೀಟ ವೇಷದ ಅಧಿಕಾರಯುತವಾದ ಅನುಭವವುಳ್ಳ ಹಾಗೂ ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟಿಯವರು. ನೈಜವಾದ, ಶುದ್ಧವಾದ, ಯಕ್ಷಗಾನೀಯ ಹಾವ-ಭಾವ, ಆಂಗಿಕ ಅಭಿನಯ ಮತ್ತು ನಾಟ್ಯಗಳ ಅಪೂರ್ವ ಸಂಗಮ. ಪರಂಪರೆಯ ಆಳವಾದ ಅನುಭವವುಳ್ಳವರು ಪೆರುವಾಯಿ ನಾರಾಯಣ ಶೆಟ್ಟಿಯವರು. ಒಟ್ಟು 51 ಕ್ಕೂ ಮಿಕ್ಕಿ ವರ್ಷಗಳ ಕಾಲ ತೆಂಕುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ತನ್ನ ಕಲಾಸೇವೆಯನ್ನು ಮಾಡಿದ್ದಾರೆ. ಈ ಸಂದರ್ಶನದಲ್ಲಿ ಪೆರುವಾಯಿಯವರು ಯಕ್ಷಗಾನದ ಹಲವು ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಯಕ್ಷಗಾನದ ಅತೀ ಸಾಮಾನ್ಯ ಅಭಿಮಾನಿಯಾದ ಹಾಗೂ ಪೆರುವಾಯಿ ನಾರಾಯಣ ಶೆಟ್ಟಿಯವರ ಅತೀ ಸಾಮಾನ್ಯ ಅಭಿಮಾನಿಯಾದ ನನ್ನ ಅಭಿನಂದನೆಯನ್ನು ಈ ಡಾಕ್ಯುಮೆಂಟರಿಯ ಮೂಲಕ ಸಲ್ಲಿಸುತ್ತಿದ್ದೇನೆ.
ಬಲು ತಾಳ್ಮೆವಹಿಸಿ ಇದನ್ನು ಮಾಡಿದ್ದೇನೆ. ಈ ಡಾಕ್ಯುಮೆಂಟರಿಯನ್ನು ನೋಡಲೂ ಸಹ ಬಹಳ ಸಮಯದ ಅನುಕೂಲ್ಯತೆಯೂ ಮತ್ತು ತಾಳ್ಮೆಯ ಆವಶ್ಯಕತೆಯೂ ಇದೆ. ಆದರೆ ಇದನ್ನು ಸಂಪೂರ್ಣ ನೋಡಿದ ಕಲಾಭಿಮಾನಿಗಳಿಗೆ ನಿಜಕ್ಕೂ ಸಂತೋಷವಾದೀತು ಎಂಬ ವಿಶ್ವಾಸವುಳ್ಳವನಾಗಿದ್ದೇನೆ.
ವೃತ್ತಿಪರನಲ್ಲ ನಾನು. ನನ್ನ ಸೀಮಿತ ತಿಳುವಳಿಕೆ, ಜ್ಞಾನ, ಮತ್ತು ಸೀಮಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಡಾಕ್ಯುಮೆಂಟರಿ ಮಾಡಿದ್ದೇನೆ. ದೋಷಗಳಿದ್ದರೂ ಕಲಾಭಿಮಾನಿಗಳು ವಿಶಾಲ ಮನಸ್ಸಿನಿಂದ ಸ್ವೀಕರಿಸುವಿರೆಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಈ ಸಾಕ್ಷ್ಯಚಿತ್ರದಲ್ಲಿ ಅಳವಡಿಸಿಕೊಂಡಿರುವ ಪೆರುವಾಯಿ ನಾರಾಯಣ ಶೆಟ್ಟಿಯವರ
ಪಾಲ್ಗೊಳ್ಳುವಿಕೆಯ ಕೆಲವು ವೀಡಿಯೋ ತುಣುಕುಗಳ ವಿವರಗಳು.
ರಕ್ತಬೀಜಾಖ್ಯ - ಹಳೆಯ ವೀಡಿಯೋ (ಮಿತ್ರರೊಬ್ಬರು ಕೊಡಮಾಡಿದ್ದು)
ರಕ್ತಬೀಜಾಖ್ಯ - ಮಿತ್ರರೊಬ್ಬರು ಕೊಡಮಾಡಿದ್ದು
ಶಿಶುಪಾಲ ವಧೆ
ಕಂಸವಧೆ
(ಶ್ರೀ ದುರ್ಗಾ ಕ್ರಿಯೇಶನ್ಸ್ ಅವರು 2007 ರಲ್ಲಿ ಬಿಡುಗಡೆಗೊಳಿಸಿದ್ದ
ವೀಡಿಯೋದಿಂದ ಆಯ್ದುಕೊಂಡಿರುವುದು - ಶ್ರೀ ದುರ್ಗಾ ಕ್ರಿಯೇಶನ್ಸ್ ಸಂಸ್ಥೆಗೆ ಧನ್ಯವಾದಗಳು)
ಒಟ್ಟು 2 ಘಂಟೆಗಳ ಈ ತುಣುಕುಗಳು ಸಂದರ್ಶನದಲ್ಲಿ ಕೊಡಮಾಡಿದೆ.
_____________________________________________________
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.
Доступные форматы для скачивания:
Скачать видео mp4
-
Информация по загрузке: