ದೇಹಕ್ಕೆ ಕಸುವು ನೀಡುವ ಬಾಯಲ್ಲಿಟ್ಟರೆ ಕರಗುವಂತ ರುಚಿಕರ ಉದ್ದಿನ ಉಂಡೆಗಳು | Urad Dal Laddu
Автор: RaJsBasu
Загружено: 2026-01-23
Просмотров: 2923
Uddina Bele Athava Uddina Kaalina Undegalu | Urad Dal Laddu/Ladoo | Good For Bones Strength, Back Pain And Knee Pain | Pregnancy Or Post Pregnancy Recipe | Best Recipe for Growing Children.
ಈ ಪಾಕ ವಿಧಾನಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆ ಸೂಚನೆಗಳು.
ಈ ರೆಸಿಪಿ ಮಾಡಲು ಹೊಟ್ಟು ಸಮೇತವಿರುವ ಹಿಡಿ ಉದ್ದಿನಕಾಳನ್ನು (ಕರಿ ಉದ್ದು ) ಬಳಸಬಹುದು ಅಥವಾ ಉದ್ದಿನಬೇಳೆಯನ್ನಾದರೂ ಬಳಸಬಹುದು. ಅಲ್ಲದೇ, ನಿಮ್ಮಲ್ಲಿ ಲಭ್ಯವಿರುವ ಯಾವುದೇ ಉದ್ದನ್ನು ಬಳಸಿ ಕೂಡ ಮಾಡಬಹುದು. ನಾನು ಈ ವಿಡಿಯೋದಲ್ಲಿ ಮಾಮೂಲಿ ಉದ್ದಿನಬೇಳೆ ಜೊತೆ ಹೊಟ್ಟು ಇರುವ ಉದ್ದಿನಬೇಳೆಯನ್ನು ಬಳಸಿದ್ದೇನೆ.
ಮಕ್ಕಳಿಗೆ ಕೊಡಲು ಮೊದಲು ಉದ್ದನ್ನು ಚೆನ್ನಾಗಿ ತೊಳೆದು ಬಿಸಿಲಿಗೆ ಅಥವಾ ಫ್ಯಾನ್ ಕೆಳಗೆ ಆರಿ ಹಾಕಿ ಒಣಗಿಸಿ ನಂತರ ಹುರಿದು ತಯಾರಿಸಿ.
ನೆನಪಿಡಿ ಉದ್ದನ್ನು ಚೆನ್ನಾಗಿ ಹುರಿದರೆ ಮಾತ್ರ ಈ ಉಂಡೆಗಳು ರುಚಿಸುತ್ತವೆ ಇಲ್ಲದಿದ್ದರೆ ಉಂಡೆಗಳ ರುಚಿಯು ಹಿಡಿಸದಿರಬಹುದು. ಆದುದರಿಂದ, ಸ್ವಲ್ಪ ಹೆಚ್ಚು ಹುರಿದರೂ ಪರವಾಗಿಲ್ಲ ಆದರೆ ಅರೆಬರೆ ಹುರಿಯದಿರಿ. ಉರಿಯು ಸಣ್ಣ ಉರಿಗಿಂತ ಸ್ವಲ್ಪ ಹೆಚ್ಚಿರಲಿ.
ನೀವು ಇದಕ್ಕೆ ಗೋಡಂಬಿ, ದ್ರಾಕ್ಷಿ, ಬಾದಾಮಿ ಅಲ್ಲದೇ ನಿಮ್ಮ ನೆಚ್ಚಿನ ಯಾವುದೇ ಡ್ರೈ ಫ್ರೂಟ್ಸ್ ಸೇರಿಸಬಹುದು. (ತುಪ್ಪದಲ್ಲಿ ಹುರಿದು).
ಉದ್ದನ್ನು ಪುಡಿ ಮಾಡುವಾಗ ಉದ್ದು ಸಂಪೂರ್ಣ ತಣ್ಣಗಾಗಿರಬೇಕು. ಮತ್ತು ಆದಷ್ಟು ಸಣ್ಣ ಜಾರ್ ಬಳಸಿ, ಇದರಿಂದ ಬೇಗನೆ ಹಿಟ್ಟನ್ನು ತಯಾರಿಸಬಹುದು ಮತ್ತು ಸಣ್ಣ ಜಾರ್ ಇದಕ್ಕೆ ಸೂಕ್ತವಾಗಿದೆ. ನಂತರ ಬೆಲ್ಲವನ್ನು ಸೇರಿಸಿ ದೊಡ್ಡ ಜಾರ್ ನಲ್ಲಿ ಬೆಲ್ಲ ಮತ್ತು ಉದ್ದಿನ ಹಿಟ್ಟು ಸಮಾನವಾಗಿ ಬೆರೆಯುವಂತೆ ಮಿಕ್ಸಿ ಮಾಡಿ.
ನೆನಪಿಡಿ ಉದ್ದಿನ ಹಿಟ್ಟು ನುಣ್ಣಗೆ ಆಗಲು ಸಮಯ ಹಿಡಿಯುತ್ತದೆ ಮತ್ತು ನೀವು ಎಷ್ಟೇ ಸಮಯ ಮಿಕ್ಸಿ ಮಾಡಿದರು ಅದು ನೂರಕ್ಕೆ ನೂರರಷ್ಟು ನುಣ್ಣಗೆ ಆಗುವುದಿಲ್ಲ, ಆದುದರಿಂದ ನಿರಾಯಾಸವಾಗಿ ಯಾವುದೇ ಭಯವಿಲ್ಲದೆ ಪುಡಿ ಮಾಡಿಕೊಳ್ಳಿ. ಒಟ್ಟಾರೆ ಹೆಚ್ಚು ತರಿತರಿಯಾಗಿರದಂತೆ ನೋಡಿಕೊಳ್ಳಿ.
ಉದ್ದಿನ ಎರಡರಷ್ಟು ಅಳತೆಯ ಬೆಲ್ಲವು ಉಂಡೆಗಳು ಸಿಹಿಯಾಗಿ ಇರುವಂತೆ ಮಾಡುತ್ತವೆ. ಹೆಚ್ಚು ಸಿಹಿ ಇಷ್ಟಪಡದವರು ಒಂದೂವರೆ ಬಟ್ಟಲು ತೆಗೆದುಕೊಳ್ಳಿ, ಅದಕ್ಕಿಂತ ಕಡಿಮೆ ಬೇಡ.
ತುಪ್ಪವು ಉದ್ದಿನ ಅಳತೆಯ ಅದೇ ಬಟ್ಟಲಿನಲ್ಲಿ ಮುಕ್ಕಾಲು ಅಥವಾ ಒಂದು ಬಟ್ಟಲು ಸಾಕು. ಸ್ವಲ್ಪ ಸ್ವಲ್ಪ ಹಾಕಿಕೊಂಡು ಉಂಡೆ ಕಟ್ಟುವ ಹದ ತರಿಸಿ ಉಂಡೆ ಕಟ್ಟಿ.
ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಒಳ್ಳೆಯದು. ಆದುದರಿಂದ ಎಲ್ಲಾ ವಯೋಮಾನದವರು ಸೇವಿಸಬಹುದು. ಅದರಲ್ಲೂ ಬೆನ್ನು ನೋವು, ಸೊಂಟ ನೋವು, ಮಂಡಿ ನೋವು ಇರುವವರಿಗೆ ಇದು ಉತ್ತಮ. ಜೊತೆಗೆ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೂ ಒಳ್ಳೆಯದು ಆದರೆ, ವೈದ್ಯರ ಅಥವಾ ದೊಡ್ಡವರ ಮಾರ್ಗದರ್ಶನದಲ್ಲಿ ಸೇವಿಸುವುದು ಉತ್ತಮ.
ಯಾವ ಆಹಾರವೇ ಆಗಲಿ ಮಿತವಾಗಿ ಸೇವಿಸುವುದು ಆರೋಗ್ಯಕರ, ಆದುದರಿಂದ ನಮ್ಮ ದೇಹಕ್ಕೆ ಪುಷ್ಟಿ ನೀಡುವ ಆಹಾರಗಳನ್ನು ಹಿತಮಿತವಾಗಿ ಸೇವಿಸಿ ಅರೋಗ್ಯ ಕಾಪಾಡಿಕೊಳ್ಳೋಣ.
ವಂದನೆಗಳು
ರಾಜ್
#uraddalladdu
#uraddalrecipe
#blackgram
#laddu
Доступные форматы для скачивания:
Скачать видео mp4
-
Информация по загрузке: