RaJsBasu

ನಮಸ್ಕಾರ ಎಲ್ಲರಿಗು
ನಮ್ಮ ಯೂಟ್ಯೂಬ್ ವಾಹಿನಿಗೆ ತಮಗೆ ಸ್ವಾಗತ
ಮನುಷ್ಯ ಸಾಯುವವರೆಗೂ ಕಲಿಯುವುದು ತುಂಬಾ ಇದೆ. ನಾವು ಕಲಿಯದೇ ಇದ್ದರೂ ಕಲಿಸುವುದ ಬಿಡೆನು ಎನ್ನುತ್ತದೆ ಈ ಮಾಯಾವಿ ಜೀವನ. ಈ ಸಮಾಜದಲ್ಲಿ ಮೊದಲಿನಿಂದಲೂ ಈ ಕೆಲಸಗಳು ಇಂತಹವರೇ ಮಾಡಬೇಕು ಎಂಬ ಕೆಲವು ಅಘೋಷಿತ ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಅದರಲ್ಲಿ ಮನೆ ಕೆಲಸಗಳು, ಅಡುಗೆ ಹಾಗು ಇತರೆ ಕೆಲಸಗಳು ಬರಿ ಹೆಣ್ಣಿನ ಜವಾಬ್ದಾರಿ ಅವಳಷ್ಟೇ ಈ ಕೆಲಸ ಮಾಡಬೇಕು ಎಂಬ ಮೂಢ ತತ್ವವೊಂದು ಮನೆಮಾಡಿದೆ. ನನ್ನ ಪ್ರಕಾರ ಇಂದಿನ ಶರವೇಗದ ಜೀವನದಲ್ಲಿ ಲಿಂಗಭೇದ ಮರೆತು ಎಲ್ಲಾ ಕೆಲಸಗಳನ್ನು ಎಲ್ಲರು ಕಲಿತು ಮಾಡಬೇಕು. ಇದು ನಾಚಿಕೆಪಟ್ಟುಕೊಳ್ಳುವ ವಿಷಯವಲ್ಲ. ಜೀವನ ಸರಿದೂಗಿಸಲು ನಮ್ಮವರೊಂದಿಗೆ ಸಂತಸದಿ ಇರಲು ನಾವೇ ಶ್ರಮವಹಿಸಬೇಕಾದ ಕೈಂಕರ್ಯ ಅಲ್ಲದೆ ಇದು ಹೆಮ್ಮೆಪಡುವ ವಿಷವೇ ಸರಿ. ಒಟ್ಟಾರೆ ಸೇವೆ ನಮ್ಮದು ಫಲ ಭಗವಂತನದು. ಧರ್ಮದ ದಾರಿಯಲ್ಲಿ ಯಾವ ಕೆಲಸವಾದರೂ ಸರಿ ಮಾಡಲು ಹಿಂಜರಿಯದಿರಿ. ಶುದ್ಧ ಚಿತ್ತದಿ ಮಾಡುವ ಕೆಲಸ ಮುಂದೊಮ್ಮೆ ಬದ್ಧತೆಯ ಹೊತ್ತು ಒಳ್ಳೆಯ ಫಲ ಕೊಡಲು ಸಿದ್ದತೆಯ ನಡೆಸಿ ನಮ್ಮ ಬಳಿ ಬಂದೆ ಬರುತ್ತದೆ. ಬನ್ನಿ ನಮ್ಮ ಈ ವೈವಿಧ್ಯಮಯ ವಾಹಿನಿಯಲ್ಲಿ ಅಡುಗೆ ಹಾಗು ಇತರೆ ಕೆಲವು ಜೀವನ ಮೌಲ್ಯಗಳನ್ನು ತಿಳಿಯೋಣ.
ಧನ್ಯವಾದಗಳು