Tulasi Ramayana Day 56,, Vaachana:Smt. Srimathi Jayaram, Vyakhyana: Smt. Jayanthi Gopal. 14/12/2025
Автор: Kumara Vyasa Mantapa, Rajajinagar
Загружено: 2025-12-14
Просмотров: 32
ಕನ್ನಡ ಸಹೃದಯ ಪ್ರತಿಷ್ಠಾನ, ಕುಮಾರ ವ್ಯಾಸ ಮಂಟಪದ,ಆಸಕ್ತರೇ ಸಹೃದಯರೇ, ಭಾರತ ಸನಾತನ ಧರ್ಮ ಹಾಗೂ ಆಧ್ಯಾತ್ಮಗಳ ಜಿಜ್ಞಾಸುಗಳೇ, ಕುಮಾರ ವ್ಯಾಸ ಮಂಟಪದ ಪ್ರಮುಖ ಕಾರ್ಯಕ್ರಮವಾದ ಭಾಮಿನಿ ಷಟ್ಪದಿಯ ಕರ್ಣಾಟ ಭಾರತ ಕಥಾ ಮಂಜರಿಯ ವಾಚನ ವ್ಯಾಖ್ಯಾನಗಳನ್ನು ವಿಶ್ವದ ಶ್ರೇಷ್ಠ ವಿದ್ವಾಂಸರು ದಿನಂಪ್ರತಿ ನಡೆಸಿಕೊಡುತ್ತಿದ್ದಾರೆ. ಕುಮಾರ ವ್ಯಾಸ ಪ್ರಶಸ್ತಿ ಪುರಸ್ಕೃತರೂ, ಕನ್ನಡ ಸಹೃದಯ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶ್ರೀಮತಿ ಕಮಲಮ್ಮನವರು, ಸುದೀರ್ಘ ಸೋದಾಹರಣ ಪೂರಿತ ವ್ಯಾಖ್ಯಾನವನ್ನೂ ಶ್ರೇಷ್ಠ ಗಮಕಿಗಳಾದ ಶ್ರೀಮತಿ ಬಿ ಎನ್ ಪ್ರಭಾರವರು ಸುಮಧುರ ಶಾರೀರದಿಂದ ತಾದಾತ್ಮ್ಯಪೂರಿತ ವಾಚನವನ್ನೂ ದಿನಂಪ್ರತಿ ಸಂಜೆ 6 ರಿಂದ 7 ರ ವರೆಗೆ ಅತ್ಯಂತ ವಿದ್ವತ್ಪೂರ್ಣಯುಕ್ತ ಶ್ರದ್ಧಾಭಕ್ತಿಗಳಿಂದ ನಡೆಸಿ ಕೊಡುತ್ತಿರುವದು ನಮ್ಮೆಲರ ಪುಣ್ಯವಿಶೇಷವಾಗಿದೆ. ಇವರ ಕಾರ್ಯಕ್ರಮವನ್ನು ವೀಕ್ಷಿಸಿ ಆಹ್ಲಾದಿಸುವ ಅವಕಾಶವನ್ನು ಪಡೆದುಕೊಳ್ಳೋಣ. ಕೆಲವರು ಬಿಡುವು ಮಾಡಿಕೊಂಡು ಕಣ್ಣಾರೆ ನೋಡಿ ಕೇಳಿ ಆನಂದಿಸುತ್ತಿದ್ದಾರೆ. ಕುಮಾರ ವ್ಯಾಸ ಮಂಟಪವು ಪ್ರತ್ಯೇಕ ಯು ಟ್ಯೂಬ್ ಚಾನಲ್ / @kumaravyasamantapa-uh5im ಪ್ರಾರoಭಿಸಿದೆ. ಪ್ರಾಪಂಚಿಕ ವಿಷಯಗಳಲ್ಲಿ ದೇವರು ನಮ್ಮನ್ನು ಮುಳುಗಿಸಿ, ಅದರ ಮಧ್ಯದಲ್ಲೂ ಇಂತಹ ಸರ್ವೋತ್ತಮ ಆಧ್ಯಾತ್ಮಿಕ ವಿಷಯಗಳನ್ನು ಕೇಳುವ ಅವಕಾಶವನ್ನೂ ಕಲ್ಪಿಸಿದ್ದಾನಲ್ಲವೇ. ಸಮಕ್ಷಮ ನೋಡಿ ಕೇಳುವ ಭಾಗ್ಯ ಶ್ರೇಯಸ್ಸು ನೀಡುವ ಕಾರ್ಯವಾಗಿದೆ. ಶ್ರೇಯಸ್ಸನ್ನು ಬಯಸುವವರಿಗೆ ಭಗವದ್ ಕೃಪೆ ಧಾರಾಳವೆಂದೂ ಕಠೋಪನಿಷತ್ತಿನಲ್ಲಿ ವೈವಸ್ವತನು (ಯಮನು) ನಚಿಕೇತನಿಗೆ ತಿಳಿಸಿದ್ದಾನೆ. ಆದ್ದರಿಂದ ಪ್ರೇಯಸ್ಸನ್ನು ಬಿಟ್ಟು, ಶ್ರೇಯಸ್ಸಿನ ಪುಣ್ಯ ಫಲಗಳನ್ನು ಪಡೆಯೋಣ. ಶತಾವಧಾನಿ ಶ್ರೀ ಆರ್ ಗಣೇಶ ರವರು, ಈ ಕಾರ್ಯಕ್ರಮವನ್ನು ನೆರಳಿನಲ್ಲಿ ಅಂದರೆ ಯು ಟ್ಯೂಬ್ ನಲ್ಲಿ ನೋಡಿ ಕೇಳುವುದಕ್ಕಿಂತಲೂ ಸಮಕ್ಷಮ ಕೇಳುವುದು ಉತ್ತಮವೆಂದು ಅಭಿಪ್ರಾಯಪಟ್ಟಿದ್ದಾರೆ. ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಕ್ಷಮ ಇದರ ಸದುಪಯೋಗ ಪಡೆದು ಕೊಳ್ಳಬೇಕಾಗಿ ವಿನಂತಿ.
ಕನ್ನಡ ಸಹೃದಯರ ಪ್ರತಿಷ್ಠಾನದ ನೂತನ ಕುಮಾರ ವ್ಯಾಸ ಮಂಟಪದ ಉದ್ಘಾಟನೆ 23/8/2023 ರರ ಬೆಳಿಗ್ಗೆ 11 ಕ್ಕೆ ರಾಜಾಜಿನಗರ ನಾಲ್ಕನೇ ವಿಭಾಗದಲ್ಲಿನ ನೂತನ ಕಟ್ಟಡದಲ್ಲಿ ನೆರವೇರಿತು. ಪ್ರಾರಂಭದಲ್ಲಿ ಗಮಕಿ ಶ್ರೀಮತಿ ಬಿ ಎನ್ ಪ್ರಭಾ ರವರು ಸುಶ್ರಾವ್ಯವಾಗಿ ಕುಮಾರ ವ್ಯಾಸ ವಿರಚಿತ ನಾಂದಿ ಪದ್ಯಗಳನ್ನು ವಾಚಿಸಿದರು. ನಂತರ ಗಮಕಿ ಶ್ರೀಮತಿ ಇಂದ್ರಾಣಿ ಮತ್ತು ತಂಡದವರು ಹಾಡಿದರು. ಸಮಾರಂಭವನ್ನು ಸನ್ಮಾನ್ಯ ಶ್ರೀ ಸುರೇಶ್ ಕುಮಾರ್ ಶಾಸಕರು ರಾಜಾಜಿನಗರ ವಿಧಾನ ಸಭಾ ಕ್ಷೇತ್ರ, ಮಾಜಿ ಸಚಿವರು ಉದ್ಘಾಟಿಸಿದರು. ಶ್ರೀ ಸುರೇಶ್ ಕುಮಾರ್ ರವರು ಕುಮಾರ ವ್ಯಾಸ ಮಂಟಪದ ಹೊಸಕಟ್ಟಡದ ನಿರ್ಮಾಣವಾದದ್ದು ತಮ್ಮ ಮೇಲಿದ್ದ ದೊಡ್ಡ ಜವಾಬ್ದಾರಿಯನ್ನು ಇಳಿಸಿದಂತೆ ಆಗಿದೆ ಎಂದು ಹೇಳಿ, ಕಾರ್ಯವಹಿಸಿದ ಇಂಜಿನಿಯರ್ ಸಿಬ್ಬಂದಿಗಳು ಶ್ರೀ ಯಶಸ್ , ಶ್ರೀ ರಾಘವೇಂದ್ರರಾವ್, ಶ್ರೀ ರಮೇಶ್, ಶ್ರೀ ಪ್ರವೀಣ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಕುಮಾರ ವ್ಯಾಸ ಮಂಟಪದವತಿಯಿಂದ ಆಸಕ್ತಿ ಹಾಗೂ ಶ್ರಮವಹಿಸಿ ಕಟಿಬದ್ಧರಾಗಿ ಕಟ್ಟಡದ ಕಾರ್ಯಕ್ಕೆ ಕಾಯಾ, ವಾಚಾ, ಮನಸಾ ದುಡಿದ ಉಪಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯ್ಡು ರವರನ್ನು ಪ್ರಶಂಸಿಸಿದರು. 1962 ರಿಂದಲೂ ಸೇವೆ ಸಲ್ಲಿಸಿದ ಕುಮಾರ ವ್ಯಾಸ ಮಂಟಪದ ಸಂಸ್ಥಾಪಕರಾದ ಕೀರ್ತಿಶೇಷ ಶ್ರೀ ರಾಜಾರಾಯರ ನಿಸ್ವಾರ್ಥ ಸೇವೆಯನ್ನೂ, ಅವರ ಬದ್ಧತೆಯನ್ನೂ ಬಹುವಾಗಿ ಕೊಂಡಾಡಿ ಸ್ಮರಿಸಿದರು. ಸಭೆಯಲ್ಲಿ ಶಾಸಕ ಶ್ರೀ ಸುರೇಶ್ ಕುಮಾರ್, ಅಧ್ಯಕ್ಷರು ಶ್ರೀಮತಿ ಕಮಲಮ್ಮ, ಉಪಾಧ್ಯಕ್ಷರು ಶ್ರೀ ವೆಂಕಟೇಶ ನಾಯ್ಡು,, ಕಾರ್ಯದರ್ಶಿ ಶ್ರೀ ರವೀಂದ್ರ, ಅತಿಥಿಗಳಾದ ಶ್ರೀ ಎವಿ ಪ್ರಸನ್ನ, ಡಾ ಅರಳುಮಲ್ಲಿಗೆ ಪಾರ್ಥಸಾರಥಿ, ಡಾ ಲಕ್ಷ್ಮಿನಾರಾಯಣ ಭಟ್ಟರು ಇವರನ್ನು ಅಭಿನಂದಿಸಲಾಯಿತು. ನಂತರ ಶ್ರೀ ಲಕ್ಷ್ಮಿನಾರಾಯಣಭಟ್ಟರು ಪರಿಚಯಿಸಿದ ಮುಖ್ಯ ಅತಿಥಿ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಯವರು, ಕುವೆಂಪುರವರು ನುಡಿದ “ಕುಮಾರವ್ಯಾಸನು ಹಾಡಿದನೆಂದರೆ, ಕಲಿಯುಗ ದ್ವಾಪರವಾಗುವುದು ! ಭಾರತ ಕಣ್ಣಲಿ ಕುಣಿವುದು ; ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು” ಉದ್ಧರಿಸಿ, ಹಳ್ಳಿ ಹಳ್ಳಿಯ ಜನರು ಕುಮಾರ ವ್ಯಾಸ ಭಾರತವನ್ನು ಮನನ ಮಾಡಿ ಪಾರಂಪರಿಕವಾಗಿ ತಲೆಮಾರುಗಳ ಮೂಲಕ ಭಾಮಿನಿ ಷಟ್ಪದಿ ಶೈಲಿಯಲ್ಲಿ ಹಾಡಿ ಕನ್ನಡ ನಾಡಿನ ಜನರು ಕವಿರಾಜ ಮಾರ್ಗದಲ್ಲಿ ಹೇಳಿದಂತೆ “ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ “ ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಆತಿಥಿ ಶ್ರೇಷ್ಠ ವ್ಯಾಖ್ಯಾನಕಾರರಾದ ಡಾ ಎವಿ ಪ್ರಸನ್ನ ಕೆಎಎಸ್ ಅಧಿಕಾರಿಗಳು ಮಾತನಾಡಿ, ನಾಡಿನಲ್ಲೇ ಈ ಕನ್ನಡ ಸಹೃದಯ ಪ್ರತಿಷ್ಠಾನದ ಕುಮಾರ ವ್ಯಾಸ ಮಂಟಪವು ಮಾಡುತ್ತಿರುವ ಸೇವೆಯನ್ನು ಸ್ಮರಿಸಿ, ಅದಕ್ಕೆ ಕಾರಣೀಭೂತರಾದ ಶ್ರೀ ರಾಜಾರಾಯರನ್ನು ಸ್ಮರಿಸಿದರು. ಈ ಹಿಂದೆ ಅನೇಕ ಶ್ರೇಷ್ಠ ಗ,ಮಕಿಗಳು ಹಾಗೂ ವ್ಯಾಖ್ಯಾನಕಾರರಾದ ಶ್ರೀಯುತ ಬಿಂದೂ ರಾಯರು, ವಾಸುದೇವರಾವ್ ರವರು, ಮತ್ತೂರು ಕೃಷ್ಣಮೂರ್ತಿಗಳು, ಹೊಸಹಳ್ಳಿ ಕೇಶವಮೂರ್ತಿಗಳು, ಶ್ರೀಮತಿ ಗಂಗಮ್ಮ ಕೇಶವಮೂರ್ತಿಗಳು, ಶ್ರೀಮತಿ ನಿರ್ಮಲ ಪ್ರಸನ್ನ, ಶ್ರೀ ರಾಮಚಂದ್ರ ಶರ್ಮಾ ತ್ಯಾಗಲಿಯವರು, ಶ್ರೀಮತಿ ಶಕುಂತಳಬಾಯಿ ಪಾಂಡುರಂಗರಾಯರು, ಶ್ರೀ ರಾಘವೇಂದ್ರರಾಯರು, ಹೆಚ್ ಎಂ ರಾಮಾರಾಧ್ಯರು, ಶ್ರೀಮತಿ ಸುಬ್ಬಲಕ್ಷಮ್ಮನವರು, ಎಂಎ ಜಯರಾಮರಾಯರು, ಶ್ರೀಮತಿ ಕಮಲಮ್ಮನವರು, ಶ್ರೀಮತಿ ಬಿ ಎನ್ ಪ್ರಭಾರವರು, ಶ್ರೀ ರಾಮಶೇಷನ್ ರವರು, ಹಾಗೂ ಅನೇಕ ವಿದ್ವಾಂಸರನ್ನು ನೀಡಿದ ಕಾರ್ಯಕ್ರಮಗಳನ್ನೂ ಸಲ್ಲಿಸಿದ ಸೇವೆಯನ್ನೂ ಸ್ಮರಿಸಿದರು. ವೇದಿಕೆಯಲ್ಲಿ ಇದ್ದ ಐವರು ಗಣ್ಯರೂ - ಶಾಸಕ ಸುರೇಶಕುಮಾರ್, ಡಾ ಪ್ರಸನ್ನ, ಡಾ ಅರಳುಮಲ್ಲಿಗೆ ಪಾರ್ಥಸಾರಥಿ, ಶತಾವಧಾನಿ ಗಣೇಶ್, ಹಾಗೂ ಶ್ರೀ ಲಕ್ಷ್ಮಿ ನಾರಾಯಣ ಭಟ್ಟರು, ಎಂ.ಇ.ಎಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದುದನ್ನು ನೆನೆದರು. ಇನ್ನು ಮುಂದೆ ಕುಮಾರ ವ್ಯಾಸ ಮಂಟಪದ ದಿನ ನಿತ್ಯದ ಕಾರ್ಯಕ್ರಮಗಳಿಗೆ ನಾಡಿನ ವಿದ್ವಾಂಸರು ಯಾವುದೇ ಅಪೇಕ್ಷಯಿಲ್ಲದೆ ಸೇವೆ ಸಲ್ಲಿಸುವ ದೊಡ್ಡ ಮನಸ್ಸು ಹೊಂದಿದ್ದಾರೆ, ಆದ್ದರಿಂದ ವಾಚನ ವ್ಯಾಖ್ಯಾನ ಮಾಡುವವರಿಗಿಂತಲೂ ಕೇಳುವವರು ಮುಖ್ಯವಾಗಿ ನಿರಂತರ ಬರಬೇಕು, ಕೇಳುವವರಿದ್ದರೆ ತಾನೆ ವಾಚಿಸುವವರು, ಎಂಬ ಅಭಿಪ್ರಾಯವನ್ನು ಡಾ ಎವಿ ಪ್ರಸನ್ನ ರವರು ವ್ಯಕ್ತಪಡಿಸಿದರು. ಅನುಪಮ ಪಾಂಡಿತ್ಯದ ಶ್ರೀ ಶತಾವಧಾನಿ ಗಣೇಶ್ ರವರು, ಸಂಸ್ಕೃತದಲ್ಲೂ, ಕುಮಾರವ್ಯಾಸ ರಂತಹ ಶ್ರೇಷ್ಠ ಕವಿಗಳು ಇಲ್ಲವೆಂದೂ, ಕುಮಾರವ್ಯಾಸರು ತಮ್ಮ ಭಾಮಿನಿ ಷಟ್ಪದಿಯ ಕರ್ಣಾಟ ಭಾರತ ಕಥಾ ಮಂಜರಿಯ ಪದ್ಯಗಳನ್ನೇನಾದರೂ ಸಂಸ್ಕೃತದಲ್ಲಿ ಬರೆದಿದ್ದರೆ, ಮಹಾಕವಿ ಕಾಳಿದಾಸರಿಗೂ ಹೆಸರು ಮಾಡುವುದು ಸವಾಲಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಹಾಗೂ ಕುಮಾರ ವ್ಯಾಸರ ಕಾವ್ಯದ ಮುಂದೆ Shakespere ಕೂಡ ಸಪ್ಪೆಯಾಗಿ ಕಾಣುತ್ತಾರೆ ಎಂದು ನುಡಿದರು. ಅಧ್ಯಕ್ಷ ನುಡಿಯಲ್ಲಿ ಹೆಸರಾಂತ ವ್ಯಾಖ್ಯಾನ ಕಾರರಾದ ಶ್ರೀಮತಿ ಕಮಲಮ್ಮನವರು ಕುಮಾರ ವ್ಯಾಸ ಮಂಟಪ ನಡೆದು ಬಂದ ದಾರಿಯನ್ನು ಸವಿವರವಾಗಿ ತಿಳಿಸಿದರು.
Доступные форматы для скачивания:
Скачать видео mp4
-
Информация по загрузке: