ಹರೇ ವೆಂಕಟಾ ಶೈಲವಲ್ಲಭ | Gayaki Ranjana Hegde | Hare venkata shaila vallabha
Автор: Rayarakrupa
Загружено: 2025-12-20
Просмотров: 122
ಹರೇ ವೆಂಕಟ ಶೈಲ ವಲ್ಲಭ / Hare venkata shaila vallabha song with with Lyrics
ರಚನೆ : ಶ್ರೀಪಾದರಾಜರು
ಹರೇ ವೆಂಕಟಶೈಲ ವಲ್ಲಭ
ಪಾಲಿಸು ನೀ ಎನ್ನಾ ||
ದುರಿತದೂರ ನೀನಲ್ಲದೆ ಧರೆಯೊಳು
ಪೊರೆವರ ನಾ ಕಾಣೆ ನಿನ್ನಾಣೆ ||
ಆರು ನಿನ್ನ ಹೊರತೆನ್ನ ಪೊರೆವರು
ನೀರಜಾಕ್ಷ ಹರಿಯೆ ಅ-ಪಾರಮಹಿಮ ಪುರಾಣಪುರುಷ
ಘೋರ ದುರಿತಗಳ ದೂರ ಮಾಡಿಸೋ ||
ಇಂದಿರೇಶ ಅರವಿಂದನಯನ ಎನ್ನ
ತಂದೆ ತಾಯಿ ನೀನೆ
ಹೊಂದಿದವರ ಅಘವೃಂದ ಕಳೆವ
ಮಂದರಾದ್ರಿಧರನೇ ಶ್ರೀಧರನೆ ||
ಮಂಗಳಾಂಗ ಮಹನೀಯ ಗುಣಾರ್ಣವ
ಗಂಗೋದಿತ ಪಾದ
ಅಂಗಜಪಿತ ಅಹಿರಾಜಶಯ್ಯ ಶ್ರೀ
ರಂಗವಿಠಲ ದೊರೆಯೇ ಶ್ರೀ ಹರಿಯೇ ||
Доступные форматы для скачивания:
Скачать видео mp4
-
Информация по загрузке: