Sakkareya paakadali||ಸಕ್ಕರೆಯ ಪಾಕದಲಿ||ಜೋಗುಳ _ಸಿಂಚನ ವಿ ಭಟ್ ||Sinchana V Bhat
Автор: Sinchana V Bhat
Загружено: 2025-12-13
Просмотров: 489
ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತ ಇರುವ ಮುದ್ದು ಮಗಳು
ಕಿರುಗೊಳದ ಮೇಲೆ ಬಾಗಿರುವ ಮಳೆಬಿಲ್ಲು
ಬಣ್ಣಗನಸಿನ ಅಮ್ಮ ಕೂತಿರುವಳು
ಯಾರೂ ತಿಳಿಯದ ಭಾಷೆ ಅದರ ಅಕ್ಷರದಂತೆ
ಮಗಳ ಹಣೆಯಲಿ ಮುಂಗುರುಳ ಸುರುಳಿ
ಹೊಸದಾಗಿ ಅಕ್ಷರವ ತಿದ್ದೊ ಮಕ್ಕಳ ಹಾಗೆ
ಕುರುಳ ತಿದ್ದುವ ಅಮ್ಮ ಮರಳಿ ಮರಳಿ
ಕ್ಷಣ ಕ್ಷಣಕು ಬದಲಾಗೊ ಅಕ್ಷರದ ಆಕಾರ
ಅದನು ತಿದ್ದುವ ಹಟದ ತಾಯ ಬೆರಳು
ವಾತ್ಸಲ್ಯ ಎನ್ನುವ ಕರುಳ ಬಳ್ಳಿಯ ಭಾಷೆ
ಮುದ್ದು ಶಾರದೆ ಬರೆದ ಮಮತೆಯೋಲೆ
ರಚನೆ: ಡಾ|| ಎಚ್.ಎಸ್. ವೆಂಕಟೇಶಮೂರ್ತಿ
ಸಂಗೀತ: ಉಪಾಸನಾ ಮೋಹನ್
SAKKAREYA PAKADALI
Lyrics: H.S. Venkatesh Murthy
Music: Upasana Mohan
Доступные форматы для скачивания:
Скачать видео mp4
-
Информация по загрузке: