ಸಂತ ಜೋಸೆಫರ ಪರಿಶುದ್ಧ ಹೃದಯ. Chaste Heart of St. Joseph.
Автор: John Sequeira
Загружено: 2025-07-01
Просмотров: 299
ಸಂತ ಜೋಸೆಫರ
ಅತೀ ಪರಿಶುದ್ಧ ಹೃದಯಕ್ಕೆ ನಮ್ಮನ್ನೇ ಒಪ್ಪಿಸಿ ಪ್ರಾರ್ಥನೆ.
ಸಂತ ಜೋಸೆಫರ
ಅತೀ ಪರಿಶುದ್ಧ ಹೃದಯವೇ,
ನಿಮ್ಮನ್ನು ಸೃಷ್ಟಿಸಿದ ದೇವರ ಪ್ರೀತಿಗಾಗಿ ಮಿಡಿಯುತ್ತಿರುವ ನಿರ್ಮಲ ಹೃದಯವೇ,
ಮರಿಯಳ
ನಿಷ್ಕಳಂಕ ಹೃದಯದ ಪ್ರೇಮಿಯೇ,
ಯೇಸುವಿನ ಪವಿತ್ರ ಹೃದಯಕ್ಕೆ ಸಾಂತ್ವನವಾಗಿದ್ದ
ಓ ಪಿತೃ ಹೃದಯವೇ ನಿಮಗೆ ವಂದನೆ.
ಸಂತ ಜೋಸೆಫರ
ಅತೀ ಪರಿಶುದ್ಧ ಹೃದಯವೇ,
ಪಿತ ದೇವರ ಪ್ರತಿಬಿಂಬವೇ,
ಸುತ ದೇವರ ರಕ್ಷಕರೇ,
ಪವಿತ್ರಾತ್ಮ ದೇವರ ಸ್ನೇಹಿತರೇ,
ದೇವರ ದಾಸಿ ನಿಷ್ಕಳಂಕ ಮರಿಯಳ ನಿತ್ಯ ಸಂಗಾತಿಯೇ, ನಿಮಗೆ ವಂದನೆ.
ಸಂತ ಜೋಸೆಫರ ಅತಿ ಪರಿಶುದ್ಧ ಹೃದಯವೇ,
ದೇವರಿಂದಲೂ, ದೇವದೂತರಿಂದಲೂ ಪ್ರೀತಿಸಲ್ಪಟ್ಟವರೇ,
ಈ ದಿನವನ್ನು ನಾನು ನಿಮ್ಮ ಪರಿಶುದ್ದ ಹೃದಯಕ್ಕೆ ಸಮರ್ಪಿಸುತ್ತಿದ್ದೇನೆ!
ನನ್ನ ಸುಖ-ದುಃಖಗಳು,
ನನ್ನ ನೋವು ನಲಿವುಗಳನ್ನು
ನಿಮ್ಮಲ್ಲಿ ಇರಿಸುತ್ತೇನೆ.
ವಿಶ್ವಾಸದಿಂದ ನಿಮ್ಮ ಮೂಲಕ ಪ್ರಾರ್ಥಿಸುವವರಿಗೆ ದೇವರ ಕೃಪೆಯನ್ನು ಪಡೆದುಕೊಡಲು ನೀವು ಯಾವಾಗಲೂ ಸಂತೋಷಪಡುತ್ತೀರಿ ಎಂದು ನನಗೆ ತಿಳಿದಿದೆ.
ಆದ್ದರಿಂದ, ನಿಮ್ಮ ಒಳ್ಳೆಯತನದಲ್ಲಿ ಭರವಸೆಯಿಟ್ಟು ನನ್ನನ್ನು ಮತ್ತು ನಾನೀಗ ಯಾರಿಗಾಗಿ ಪ್ರಾರ್ಥಿಸುತ್ತಿದ್ದೇನೋ ಅವರನ್ನೂ ನಿಮ್ಮ ಪರಾಮರಿಕೆಗೆ ಒಪ್ಪಿಸುತ್ತೇನೆ.
ನಿಮ್ಮ ಪ್ರಾಮಾಣಿಕ ಪ್ರತಿಬಿಂಬಗಳಾಗಲು ನಮಗೆ ಅಗತ್ಯವಾದ ಕೃಪೆಯನ್ನು ಪಡೆದುಕೊಡಿರೆಂದು ಅತಿ ವಿನಯದಿಂದ ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ನನ್ನ ಆತ್ಮಿಕ ಮತ್ತು ಲೌಕಿಕ ಜೀವನಕ್ಕೆ ಅಗತ್ಯವಾದ ಸರ್ವ ಕೃಪೆಗಳನ್ನು ನನ್ನ ಮೇಲೆ ಸುರಿಸಬೇಕೆಂದು ನಿಮ್ಮ ಪ್ರಿಯ ಪುತ್ರರಲ್ಲಿ ಪ್ರಾರ್ಥಿಸಿರಿ.
ನಿಮ್ಮ ಪಾಲನೆಯಲ್ಲಿರುವ ನಮ್ಮ ಮಾತೆಯಾದ, ಪವಿತ್ರ ಕಥೋಲಿಕ ಧರ್ಮಸಭೆ, ಎಲ್ಲ ವಿಷಯದಲ್ಲೂ ಜಯಹೊಂದಲು ಅಗತ್ಯವಾದ ಎಲ್ಲ ಅನುಗ್ರಹಗಳನ್ನು ಅದಕ್ಕೆ ದಯಪಾಲಿಸಬೇಕೆಂದು ಸರ್ವೇಶ್ವರನಾದ ದೇವರಲ್ಲಿ ಬಿನ್ನಯಿಸಿರಿ.
ಈ ಎಲ್ಲವನ್ನು ನಿಮ್ಮ ಆರೈಕೆಗೆ ಒಪ್ಪಿಸಲಾಗಿದ್ದ ಎರಡು ಅತಿ ಶ್ರೇಷ್ಠ ನಿಧಿಗಳಾದ ಯೇಸುವಿನ ಪವಿತ್ರ ಹೃದಯ ಮತ್ತು ಮರಿಯಳ ನಿಷ್ಕಳಂಕ ಹೃದಯದ ಮುಖಾಂತರ ಪ್ರಾರ್ಥಿಸುತ್ತೇನೆ.
ಆಮೆನ್.
ಪ್ರಭುವಿನ ಪ್ರಾರ್ಥನೆ
ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮ ಪೂಜಿತವಾಗಲಿ ನಿಮ್ಮ ರಾಜ್ಯ ಬರಲಿ, ನಿಮ್ಮ ಚಿತ್ರ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭುವಿಯಲ್ಲಿಯೂ ನೆರವೇರಲಿ.
ನಮ್ಮ ಅನುದಿನದ ಆಹಾರವನ್ನು ಇಂದು ನಮಗೆ ನೀಡಿರಿ.
ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಮ್ಮ ಪಾಪಗಳನ್ನು ಕ್ಷಮಿಸಿರಿ; ನಮ್ಮನ್ನು ಶೋಧನೆಗೆ ಒಳಪಡಿಸದೆ, ಕೇಡಿನಿಂದ ನಮ್ಮನ್ನು ರಕ್ಷಿಸಿರಿ. ಆಮೆನ್.
ನಮೋ ಮರಿಯಾ, ಕೃಪಾವರ ಪೂರ್ಣೇಯೇ, ಪ್ರಭು ನಿಮ್ಮೊಡನೆ ಇದ್ದಾರೆ ಸ್ತ್ರೀಯರಲ್ಲಿ ನೀವು ಧನ್ಯರು ಮತ್ತು ನಿಮ್ಮ ಉದರದ ಫಲವಾದ ಯೇಸು ಧನ್ಯರು.
ಸಂತ ಮರಿಯಾ, ದೇವಮಾತೆಯೇ, ಪಾಪಿಗಳಾಗಿರುವ ನಮಗಾಗಿ, ಈಗಲೂ ನಮ್ಮ ಮರಣದ ಸಮಯದಲ್ಲಿಯೂ ಪ್ರಾರ್ಥಿಸಿರಿ. ಆಮೆನ್.
Доступные форматы для скачивания:
Скачать видео mp4
-
Информация по загрузке: