ಪದಪ್ರಣತಿ #14 – ನಾನಲ್ಲ 'ಅಯ್ಯೋ ಪಾಪ' ದ ಮುದಿ ವನಿತೆ- ರಚನೆ ಮತ್ತು ವಾಚನ -ಚಿದಂಬರ ಕಾಳಮಂಜಿ
Автор: NammaneSangeethaPranathi-ChidambaraKalamanji
Загружено: 2024-07-17
Просмотров: 455
ಪದಪ್ರಣತಿ #14
ಕವಿತಾ ವಾಚನ
ಶೀರ್ಷಿಕೆ : ನಾನಲ್ಲ 'ಅಯ್ಯೋ ಪಾಪ' ದ ಮುದಿ ವನಿತೆ
ರಚನೆ ಮತ್ತು ವಾಚನ
ಚಿದಂಬರ ಕಾಳಮಂಜಿ
***************
ನಾನಲ್ಲ
'ಅಯ್ಯೋ ಪಾಪ' ದ ಮುದಿ ವನಿತೆ
ನಾನು,
ಸಂತೆಯೊಳಗಿನ ಸಂತೃಪ್ತೆ
ಅನುಭವಗಳ ಕಂತೆ
ನನಗಿಲ್ಲ ಕೊರತೆ, ಚಿಂತೆ
ಯಾಕೆಂದರೆ
ಇರದ 'ಪಾಯಸ' ಕ್ಕೆ ತಡಕದೆ
ಇರುವ 'ಗಂಜಿ'ಯ ಸವಿಯುವ
ಬಾಳಕಲೆಯ ಕಲಿತ ಕಲಾವಿದೆ ( ಕಲಾವಂತೆ)
ಸಂತೆಯಿಂದ ಸಂತೆಗೆ ಚಲಿಸುವ ಜಂಗಮ ಸಂಸ್ಥೆ
ನನ್ನಾವರಣವ ಬೆಳಗುವ ಹೆಮ್ಮೆಯ ಹಣತೆ
ಉತ್ಸಾಹದ ಅಕ್ಷಯದ ಒರತೆ
*******************************************
ಈ ಜಗವೊಂದು ಸುಂದರ ಸಂತೆ
ಮೇಲಿನ ವಿನ್ಯಾಸಕ ಬರೆದಿಹನು ಸಂಹಿತೆ
ಅದನು ಪಾಲಿಸಿ
ಸುಖಿಸಿ , ಸಂಭ್ರಮಿಸೋ,
ಹೊಣೆ , ಕಲೆ ಮಾತ್ರ ನಮ್ಮದಂತೆ
ಇದ ಗ್ರಹಿಸುವ ಗ್ರಾಹಕನ ಬದುಕೇ ಸಂದರ ಕವಿತೆ
ಇದು ನನ್ನ ಜೀವನ ಪಾಠ- ಭಗವದ್ಗೀತೆ
********************************************
ಅಲ್ಲ ಇದು, ಬರಿ ಕೈಗಾಡಿ
ಇದು ನನ್ನ ದೇವರ ಗುಡಿ
ಅಲ್ಲ ಇದು, ಬರಿ ಸರಕು ತೂಗುವ ತಕ್ಕಡಿ
ಬದುಕ ತೂಗುವ, ತೂಗಿಸುವ , ಕೌಶಲ್ಯವ ತೋರಿಸಿದ ಕನ್ನಡಿ
********************************************
ಬನ್ನಿ, ಗ್ರಾಹಕರೆ
ಸಂತೆಯ ಸಾಗರ ಮಹಾ ಪಾತ್ರೆ ನಮ್ಮದು
ಮೊಗೆಯುವ ಬೊಗಸೆಯ ಗಾತ್ರ ನಿಮ್ಮದು
ಸಂತೆಯ ‘ಹಬ್ಬ’ ಮಾಡುವ ಪಾತ್ರ, ನಮ್ಮೆಲ್ಲರದು
********************************************
??
ಈಗ ಹೇಳಿ
ನಾನು
'ಅಯ್ಯೋ ಪಾಪ' ದ ಮುದಿ ವನಿತೆಯೇ ??
Доступные форматы для скачивания:
Скачать видео mp4
-
Информация по загрузке: