Baduku Anno Natakadaga | Full Song | Kannada Folk Fusion Song | Uttara Karnataka Song
Автор: Sanjay Kumar K H
Загружено: 2025-09-15
Просмотров: 36236
✨ Life is a Drama – which has a end ✨
Life is like a drama… sometimes we rise, sometimes we fall, sometimes we play Rama, sometimes Ravana.
This soulful Kannada song captures the beauty, struggles, and truths of life in poetic form. 🎭
🎶 Song Theme:
A journey of life compared to a stage play — with costumes, makeup, joy, pain, dreams, and reality. The lyrics reflect how everything is temporary, and true wisdom lies in accepting life’s ups and downs.
🌟 Highlights:
Original Kannada Lyrics (Philosophical / Folk Fusion Style)
Includes folk percussions and classical instruments for great feeling.
Artists:
Vocal, Music, Editing: Sanjay Kumar K H
Thanks to Reetesh Puluse for helping with videos shoots.
Lyrics:
ಬದುಕು ಅನ್ನೋ ನಾಟಕದಾಗ, ಎಲ್ಲಾ ಇರತೈತಿ,
ಒಮ್ಮೆ ಏಳು, ಒಮ್ಮೆ ಬೀಳು ಅನ್ನೋ ಪಾಠ ಸಿಗತೈತಿ!
ಬದುಕು ಅನ್ನೋ ನಾಟಕದಾಗ, ಎಲ್ಲಾ ಇರತೈತಿ,
ಒಮ್ಮೆ ರಾಮ, ಒಮ್ಮೆ ರಾವಣ ಅಂತ part-u ಸಿಗತೈತಿ!
ಕಲರ್ ಕಲರ್ ಬಟ್ಟಿ ಉಟ್ಟಕೊಂಡು ಸ್ಟೇಜ ಹತ್ತಬೇಕ್,
ಮಾಲೀಕ ಕೊಟ್ಟ ಡೈಲಾಗ ಒದರಿ ತಾಳಕ್ ಕುಣಿತಿರಬೇಕ್!
ಕಲರ್ ಕಲರ್ ಮೇಕಪ ಹಚ್ಚಿ ಸ್ಟೇಜ ಹತ್ತಬೇಕ್,
ಮನಸಿನ ಈಚಿಗಿ ಬ್ಯಾನಿ ಇದ್ದರ್, ಆಚಿಗಿ ನಗತಿರಬೇಕ್!
ನಾಟಕ ಮುಗಿಸಿ ಬಣ್ಣ ವರಸಿ train a ಹತ್ತಬೇಕ್,
ಮಾಲೀಕ ಕೊಟ್ಟ ನಂಬರ ಹುಡುಕಿ ಸೀಟ ಹಿಡಿಯಬೇಕ್,
ಮೂಟಿ ಕಟ್ಟಬೇಕ್, ಊರ ಸೇರಬೇಕ್!
ಬದುಕು ಅನ್ನೋ ನಾಟಕದಾಗ, ಎಲ್ಲಾ ಇರತೈತಿ,
ಒಮ್ಮೆ ಏಳು, ಒಮ್ಮೆ ಬೀಳು ಅನ್ನೋ ಪಾಠ ಸಿಗತೈತಿ!
ಹುಚ್ಚು ಕುದುರಿಯಂತ ಮನಸಿಗಿ ಆಸಿ ಬಹಳ ಐತಿ.
ಅದರ, ರೊಕ್ಕಾ ಅನ್ನೋ ರೆಕ್ಕಿ ಇಲ್ದ, ಮೂಲ್ಯಾಗ್ ಕೊರಗುತ್ತೈತಿ!
ಹುಚ್ಚು ಕುದುರಿಯಂತ ಮನಸಿಗಿ ಆಸಿ ಬಹಳ ಐತಿ.
ಅದರ, ರೊಕ್ಕಾ ಅನ್ನೋ ರೆಕ್ಕಿ ಇಲ್ದ, ಮೂಲ್ಯಾಗ್ ಕೊರಗುತ್ತೈತಿ!
ಕನಸನ್ನೋ ಮಾಯಾ ಪಿಕ್ಚರ್ ನೋಡುತ ಓಡುದ ಮರೆತಂತೇತಿ,
ಮಂದಿಗಿ ಚಂದಗ ಕಾಣುದು ಹೆಂಗ ಆನ್ನುದ ತೇಲಿಯೊಳಗ್ ಐತಿ!
ಕನಸನ್ನೋ ಮಾಯಾ ಪಿಕ್ಚರ್ ನೋಡುತ ಓಡುದ ಮರೆತಂತೇತಿ,
ಮಂದಿಗಿ ಚಂದಗ ಕಾಣುದು ಹೆಂಗ ಆನ್ನುದ ತೇಲಿಯೊಳಗ್ ಐತಿ!
ತಾನ್ಯರ್ ಅನ್ನುದ ತಾನೆ ಮರೆತು, ತನ್ನನ್ನೇ ಹುಡುಕುತೈತಿ,
ಅಸಲಿಗಿ ಜೀವನ ತಿಳಿಯೋದ್ರೊಳಗ ನಾಟಕ ಮುಗಿದಿರುತೈತಿ!
Train ಹೊಂಟಿರುತೈತಿ, ಊರ ತಲುಪಿರುತೈತಿ!
ಬದುಕು ಅನ್ನೋ ನಾಟಕದಾಗ, ಎಲ್ಲಾ ಇರತೈತಿ,
ಒಮ್ಮೆ ಏಳು, ಒಮ್ಮೆ ಬೀಳು ಅನ್ನೋ ಪಾಠ ಸಿಗತೈತಿ!
ಬದುಕು ಅನ್ನೋ ನಾಟಕದಾಗ, ಎಲ್ಲಾ ಇರತೈತಿ,
ಒಮ್ಮೆ ರಾಮ, ಒಮ್ಮೆ ರಾವಣ ಅಂತ part-u ಸಿಗತೈತಿ!
ನೀರಿನ ಮ್ಯಾಲಿನ ಗುಳ್ಳಿ ಹಂಗ ಜೀವ್ನ ತೇಲತೇತಿ,
ಖಾಯಂ ಯಾವುದು ಅಲ್ಲ, ಮಾಲೀಕ ಬಲ್ಲ, ಯಾಕರ ಮಾಡತಿ ಚಿಂತಿ?
ನೀರಿನ ಮ್ಯಾಲಿನ ಗುಳ್ಳಿ ಹಂಗ ಜೀವ್ನ ತೇಲತೇತಿ,
ಖಾಯಂ ಯಾವುದು ಅಲ್ಲ, ಮಾಲೀಕ ಬಲ್ಲ, ಯಾಕರ ಮಾಡತಿ ಚಿಂತಿ?
ನಿನ್ನಿ ಅನ್ನುದು ಮುಗಿಸಿದ ಸಂಚಿಕಿ, ಈ ದಿನದೊಳಗದ ಬದುಕು!
ನಾಳಿ ಅನ್ನುದು ಬಾರದ ಪತ್ರಿಕಿ, ಈ ಕ್ಷಣದೊಳಗ ನೀ ಹುಡುಕು!
ಎಲ್ಲರ ಮನಸಿನ ಮನಿಯೊಳಗೊಂದು ಕತ್ತಲ ಕೋಣಿ ಐತಿ,
ಕಾಡುವ ನೆನಪಿನ ಪೆಟ್ಟಿಗಿಯೊಂದು ಹಂಗ ಧೂಳ್ ಹಿಡದೈತಿ,
ನಿಂಗ ನೋಡ್ತಿರುತೈತಿ, ಬಾಳ್ ಸೆಳಿತಿರುತೈತಿ!
....
ಬದುಕು ಅನ್ನೋ ನಾಟಕದಾಗ, ಎಲ್ಲಾ ಇರತೈತಿ,
ವೂಮ್ಮೆ ಏಳು, ವೂಮ್ಮೆ ಬೀಳು ಎಂಬಾ ಪಾಠ ಸಿಗತೆತಿ
ಜೀವನ ಒಂದು ಸೈಕಲ್ ಹಂಗ, ಮುಂದಕ್ ಓಡತೇತಿ.
ಅರಿತು ನೆಡೆದವ ಶಾಣ್ಯ, ಬಿಟ್ಟವ ಶೂನ್ಯ... ಜೀವನವೇ ಒಂದು ಸಂತಿ..l
💡 Keywords / Tags:
Kannada life song, Kannada motivational song, Kannada folk song, Kannada philosophy song, Kannada drama song, new Kannada song 2025, Kannada original song, Kannada life motivation, Kannada emotional song
🙏 If you connected with these lyrics, don’t forget to LIKE, COMMENT & SUBSCRIBE for more soulful Kannada creations.
#KannadaSong #LifeSong #MotivationalKannadaSong #DramaOfLife
Доступные форматы для скачивания:
Скачать видео mp4
-
Информация по загрузке: