Danger ORSL for Diarrhea | Deccan Report Exclusive | Karnataka
Автор: DECCAN REPORT KANNADA
Загружено: 2025-10-21
Просмотров: 261
ಡಯೇರಿಯಾ ಅಂದ್ರೆ ಅತಿಸಾರ. ಅಶುದ್ಧ ನೀರು ಮತ್ತು ಇನ್ನಿತರ ಕಾರಣದಿಂದ ಮಕ್ಕಳನ್ನು ಕಾಡುವ ಈ ಸೋಂಕಿಗೆ ಕರ್ನಾಟಕದಲ್ಲಿ ನೂರಾರು ಮಕ್ಕಳು ಈಗಾಗಲೆ ಬಲಿಯಾಗಿದ್ದಾರೆ. ಈ ಸೋಂಕು ಬಂದಾಕ್ಷಣ ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ಡಿಹೈಡ್ರೇಶನ್'ನಿಂದ ಬಳಲುತ್ತಿರುವ ಮಕ್ಕಳಿಗೆ ವೈದ್ಯರು ORS ಕುಡಿಸುವಂತೆ ಸೂಚಿಸಿರುತ್ತಾರೆ. ಆದರೆ ORS ಎಂದಾಕ್ಷಣ ಪೋಷಕರು ಮೆಡಿಕಲ್ ಸ್ಟೋರ್ ಗಳಲ್ಲಿ ಮಾರಾಟ ಮಾಡಲಾಗುವಂತಹ ORSL ಎಂಬ ಟೆಟ್ರಾ ಪಾಕೆಟ್ ನಲ್ಲಿ ದೊರಕುವ ಜ್ಯೂಸ್ ಕುಡಿಸೋದು ಸರ್ವೇ ಸಾಮಾನ್ಯ ಆಗಿದೆ. ಆದ್ರೆ ವಿಚಾರ ಏನಪ್ಪಾ ಅಂದ್ರೆ, ನಿಜವಾಗಿಯೂ ORS ಎಂದರೆ Oral rehydration salt ಅಥವಾ solution. ಆದರೆ JNTL Consumer Health (India) Pvt. Ltd ಸಂಸ್ಥೆ ತಯಾರಿಸುತ್ತಿರೋ ORSL ಕೇವಲ ಬೆವತು ಆಯಸವಾಗಿ ದಣಿದವರಿಗೆ ಒಂದು ಎನರ್ಜಿ ಡ್ರಿಂಕ್ ರೀತಿ ಕೆಲಸ ಮಾಡುತ್ತೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ" ಅರ್ಥಾತ್ "FSSAI" ಈ ORSL ಡಯೇರಿಯಾಗೆ ಸೂಕ್ತ ಔಷಧ ಅಲ್ಲ ಅಂತಾ ತಿಳಿಸಿದೆ. ಸದ್ಯ ಈ ಲಿಕ್ವಿಡ್ ತಯಾರಿಸ್ತಿರೋ
JNTL Consumer Health (India) Pvt. Ltd ಸಂಸ್ಥೆ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಕೂಡ World Health Organization ಮತ್ತು FSSAI ನಿಯಮಕ್ಕೆ ಅನುಗುಣವಾಗಿ ಈ ಸಂಸ್ಥೆ ORS ತಯಾರಿಸಿಲ್ಲ ಅಂತಾ ತಿಳಿಸಿದ್ದು, ಇದನ್ನು ನಿಷೇಧಿಸುವ ಬದಲು, ಈ ಪ್ಯಾಕೆಟ್ ಮೇಲೆ ಇದು ORS ಅಲ್ಲಾ ಅಂತಾ ಎಂದಿನಂತೆ ನಮೂದಿಸಿ ಮಾರಾಟ ಮಾಡಲು ತಿಳಿಸಿದೆ.
ಹೈದರಾಬಾದ್ ಮೂಲದ ಡಾಕ್ಟರ್ ಶಿವರಂಜಿನಿ ಸಂತೋಷ್ ಕಳೆದ 8 ವರ್ಷದಿಂದ ORSL ಕಂಪನಿ ವಿರುದ್ದ ಹೋರಾಟ ಮಾಡ್ತಿದ್ದು, ಇವರ ಸಮಾಜಿಕ ಕಳಕಳಿಯನ್ನು ಸದ್ಯ ದೆಹಲಿಯ ಹೈಕೋರ್ಟ್ ಎತ್ತಿಹಿಡಿದಿದೆ. ಕರ್ನಾಟಕದಲ್ಲೂ ಕೂಡ ನಮ್ಮ ಮಕ್ಕಳಿಗೆ ಪೋಷಕರು ಮತ್ತು ವೈದ್ಯರು ಇದರ ಬಗ್ಗೆ ಮಾಹಿತಿ ಇಲ್ಲದ ಕಾರಣ ಡಯೇರಿಯಾಗೆ ಈ ORSL ಬಳಸ್ತಿದ್ರು. ಹೀಗಾಗಿ ಡೆಕ್ಕನ್ ರಿಪೋರ್ಟ್ ಕನ್ನಡ ನಿಮಗೆ ಈ ಮಾಹಿತಿಯನ್ನ ನೀಡ್ತಿದ್ದು, ಆದಷ್ಟು ಹೆಚ್ಚು ಜನರಿಗೆ ಈ ವಿಷಯ ತಲುಪುವಂತೆ ಎಚ್ಚರವಹಿಸಿ. ಕೇವಲ ಮಕ್ಕಳು ಮಾತ್ರವಲ್ಲ ಯಾವುದೇ ವಯಸ್ಸಿನವರಿಗಾದರೂ ಡಯೇರಿಯಾ ಆದ ಸಂದರ್ಭದಲ್ಲಿ ORSL ಬಳಸದಂತೆ ತಿಳಿಸಿ.
Priority News, ಡೆಕ್ಕನ್ ರಿಪೋರ್ಟ್ ಕನ್ನಡ.
#news #new #newvideo #newsupdate #newstatus #newstoday #viral #viralreels #viralshort #viralvideo #viralshorts #viralvideos #viral_video #viralnews #children #bjp #indiannationalcongress #karnataka #karnatakahighcourt #karnatakalatestnews #krsparty #media #medical #pharmacy #ors #orsl #online #medicalmafia #diarrhoea #diarrheatreatment
Доступные форматы для скачивания:
Скачать видео mp4
-
Информация по загрузке: