Shiva Pooja & Abhisheka for Maha Shivarathri | ಶಿವರಾತ್ರಿ ಹಬ್ಬಕ್ಕೆ ಶಿವನ ಅಭಿಷೇಕ
Автор: Mallamma Ajji Cooking Granny
Загружено: 2020-02-20
Просмотров: 45885
#ಶಿವನಅಭಿಷೇಕ #ಮಹಾಶಿವರಾತ್ರಿ #ShivanaAbhisheka
Mallamma ajji explains about the abhisheka, pooja and many more for maha shivarathri day.
ಶಿವರಾತ್ರಿಗೆ ಶಿವನ ಅಭಿಷೇಕ
ಪಂಚಾಮೃತಕ್ಕೆ ಬೇಕಾಗುವ ಸಾಮಾನು :-
೧. ಹಾಲು
೨. ಮೊಸರು
೩. ತುಪ್ಪ
೪ ಕಲ್ಲು ಸಕ್ಕರೆ
೫. ಜೇನು ತುಪ್ಪ
ನಂತರ ಗಂಧ, ವಿಭೂತಿ ಇಂದ ಅಭಿಷೇಕ ಮಾಡಬೇಕು.
ರುದ್ರಾಭಿಷೇಕ : (optional)
ಹಾಲು, ಮೊಸರು, ತುಪ್ಪ, ಕಲ್ಲು ಸಕ್ಕರೆ, ಜೇನು ತುಪ್ಪ, ಎಳನೀರು, ಸೌತೆಕಾಯಿ, ಕಬ್ಬಿನಹಾಲು, ಅರ್ಘ್ಯ, ಪಾದ್ಯ, ಆಚಮನೀಯ, ನಿಂಬೆ ಹಣ್ಣು, ಬಾಳೆ ಹಣ್ಣಿನ ರಸಾಯನ,ಮತ್ತು ಗಂಜಲ.
ಶಿವ ಪೂಜೆಗೆ ಬೇಕಾದ ಸಾಮಾನು :
ಎರಡು ಪಾತ್ರೆಯಲ್ಲಿ ನೀರು, ಊದಿನಕಡ್ಡಿ, ಕರ್ಪೂರ,ಬಿಲ್ವ ಪತ್ರೆ, ತುಂಬೆ ಹೂವ, ರುದ್ರಾಕ್ಷಿ ಹೂವು ಬಿಳಿ ಎಕ್ಕದ ಹೂವು,ತುಂಬ ಶ್ರೇಷ್ಠವಾದದ್ದು. ರುದ್ರಾಕ್ಷಿ ಸರ, ಒಂದು ಹಾರ, ಗೆಜ್ಜೆ ವಸ್ತ್ರ, ಅಂಗದಾರ, ವಿಬೂತಿ ಗಟ್ಟಿ, ಗಂಧ, ಅಕ್ಷತೆ, ಗರಿಕೆ.
ರಾತ್ರಿ ಪೂಜೆಗೆ ಬೆಳಗಿನಿಂದಲೇ ಸಡಗರ ಆ ಸಡಗರವೇ ನಮ್ಮಲ್ಲಿರೋ ಭಕ್ತಿ. ದೇವರ ಸಾಮಾನುಗಳನ್ನು ಎಲ್ಲಾ ಹಬ್ಬಗಳಲ್ಲೂ ತೊಳೆದು, ವರೆಸಿ, ವಿಭೂತಿ, ಗಂಧ, ಅಕ್ಷತೆ, ಅರಿಶಿನ, ಕುಂಕುಮ ಹಚ್ಚಬೇಕು.
ದೇವರ ಸಾಮಾನುಗಳನ್ನು ತೊಳೆದಾಗ ಪಂಚಾಮೃತದಿಂದ ಅಭಿಷೇಕ ಮಾಡಿ, ನಂತರ ತೊಳೆದು, ಅದಕ್ಕೆ ಅಲಂಕಾರವನ್ನು ಮಾಡಿ ಜೋಡಿಸಿದರೆ ಕೆಲಸಗಳು ಕಮ್ಮಿಯಾಗುತ್ತದೆ.
ದೇವರನ್ನು ನಂಬಿ ಯಾರು ಕೆಟ್ಟವರಿಲ್ಲ. ದೇವರನ್ನು ನಂಬಿ ಭಕ್ತಿ ಇಂದ ನಿಮ್ಮ ಬೇಡಿಕೆಗಳನ್ನು ಪೂಜೆಯಾದ ನಂತರ ಬೇಡಿಕೊಳ್ಳಿ.
ಮಗು ಅತ್ತರೇನೇ ತಾಯಿ ಹಾಲು ಕೊಡುವುದು. ಹಾಗೆ ನಮ್ಮ ಬೇಡಿಕೆಗಳನ್ನು ದೇವರ ಮುಂದೆ ಬೇಡಿಕೊಳ್ಳಬೇಕು.
ಅಂಗಲಾಚಿ ನಮ್ಮ ಪ್ರಾರ್ಥನೆಗಳನ್ನು ಹೇಳಿಕೊಳ್ಳಬೇಕು. ದೇವರು ಕೂಡ ಕಣ್ಣು ಬಿಟ್ಟು ನಮ್ಮ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳುತ್ತಾನೆ.
ದೇವರು ಇದ್ದಾನೆ ಎಂದೇ ಎಲ್ಲರೂ ಶಕ್ತಾನುಸಾರ ದೇವರನ್ನ ನಂಬಿ ಪೂಜಿಸುವುದು. ನಾವು ಅಡಿಗೆ ಮಾಡುವಾಗ ಎಲ್ಲಾ ಸಾಮಾನುಗಳನ್ನು ಧಾರಾಳವಾಗಿ ಹಾಕಿ ಮಾಡಿದರೆ ಅಡಿಗೆ ತುಂಬ ಚೆನ್ನಾಗಿರುತ್ತದೆ. ಹಾಗೆನೇ ನಾವು ಯಾವ ನಂಬಿಕೆ ಇಂದ, ಎಷ್ಟು ಭಕ್ತಿಯಿಂದ, ಶ್ರದ್ಧೆಯಿಂದ, ನಿರ್ಮಲವಾದ ಮನಸ್ಸಿನಿಂದ ನಂಬಿ ಧಾರಾಳವಾಗಿ ವಿಜೃಂಭಣೆಯಿಂದ ಸಾದಾರಣವಾಗಿ ಯಾದರು ಪರವಾಗಿಲ್ಲ, ಭಯ ಭಕ್ತಿಯಿಂದ ಪೂಜಿಸಿದರೆ ಶಿವನ ಆಶೀರ್ವಾದವನ್ನು ಪಡೆಯುತ್ತೇವೆ. ಆದರೆ ನಾವು ಕೂಡ ನ್ಯಾಯ, ನೀತಿ, ದಾನ, ಧರ್ಮ, ಭಯ, ಭಕ್ತಿ, ಇವುಗಳನ್ನು ಸಂಪ್ರದಾಯವಾಗಿ ನಡೆಸಬೇಕು.
ದೇವರು ಎಲ್ಲಿರುತ್ತಾನೆ ಅಂದರೆ - ವಯಸ್ಸಾದ ತಂದೆ ತಾಯಿಗಳನ್ನೂ ಚೆನ್ನಾಗಿ ನೋಡಿ ಕೊಳ್ಳಿ. ತಂದೆ ತಾಯಿಗಳೇ ನಿಮಗೆ ದೇವರು.
ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ನೀವುಗಳು ನಡೆದರೆ ನಿಮ್ಮ ಮಕ್ಕಳು. ಅಕ್ಕ ಪಕ್ಕದವರು, ನೆಂಟರು, ಸ್ನೇಹಿತರು, ಬಂಧುಗಳು ಎಲ್ಲರೂ ನಿಮ್ಮನ್ನು ನೋಡಿ ಕಲಿಯುತ್ತಾರೆ .
ದಿನ ನಿತ್ಯವೂ ನಾವು ಬಹಳಷ್ಟು ಕಲಿಯುತಿರುತ್ತೇವೆ. ನಾವು ಸರಿಯಾದ ದಾರಿಯನ್ನು ಹೇಗೆ ರೂಡಿ ಮಾಡಿಕೊಳ್ಳುತ್ತೇವೋ ಹಾಗೆ ಕೆಟ್ಟ ದಾರಿಯನ್ನು ಬಿಟ್ಟು ಬಿಡಬೇಕು. ಮಕ್ಕಳು ನಮ್ಮನ್ನು ನೋಡಿ ಕಲಿಯುತ್ತಿರುತ್ತಾರೆ.
ನಾವು ಹೇಗೆ ಜೀವನ ಮಾಡುತ್ತೇವೋ ಹಾಗೆ ಮಕ್ಕಳು ಮಾಡುತ್ತವೆ. ಎಲ್ಲ ಹಬ್ಬಗಳನ್ನು ಆಚರಿಸಿ, ನಿಮ್ಮ ಮಕ್ಕಳಿಗೆ ಅದರ ಮಹತ್ವ ತಿಳಿಸಿ.
ಶಿವರಾತ್ರಿ ಹಬ್ಬಕ್ಕೆ ವಯಸ್ಸಾದವರು, ಕೆಲಸಕ್ಕೆ ಹೋಗುವವರು, ಮಕ್ಕಳು, ಕಾಯಿಲೆ ಇರುವವರು ಉಪವಾಸ ಮಾಡಲು ಆಗದಿದ್ದರೆ ಗೋಧಿ, ರವೆ, ಅವಲಕ್ಕಿ ಇಂದ ಮಾಡಿದ ಪದಾರ್ಥಗಳ್ಳನ್ನು ತಿನ್ನಬಹುದು.
ಶಿವರಾತ್ರಿ ಹಬ್ಬಕ್ಕೆ ವಯಸ್ಸಾದವರು, ಕೆಲಸಕ್ಕೆ ಹೋಗುವವರು, ಮಕ್ಕಳು, ಕಾಯಿಲೆ ಇರುವವರು ಉಪವಾಸ ಮಾಡಲು ಆಗದಿದ್ದರೆ ಗೋಧಿ, ರವೆ, ಅವಲಕ್ಕಿ ಇಂದ ಮಾಡಿದ ಪದಾರ್ಥಗಳ್ಳನ್ನು ತಿನ್ನಬಹುದು. ಹಾಗೆ ರಾತ್ರಿ ಉಪ್ಪು ಇಲ್ಲದ ತಿಂಡಿಗಳನ್ನು ತಿನ್ನಿ.
ಶಿವರಾತ್ರಿ ದಿವಸ ಅನ್ನ ತಿಂದರೆ ಹುಳು ತಿಂದ ಹಾಗೆ ಎಂದು ಹಿರಿಯರು ಹೇಳುತ್ತಾರೆ.
ಆ ಶಿವನು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.
ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು !!!
thanks for watching
please like, share and comment
Also visit www.cookinggranny.com
Доступные форматы для скачивания:
Скачать видео mp4
-
Информация по загрузке: