Ninyako Ninna Hangyako
Автор: Dr.Govindaraj AG
Загружено: 2026-01-11
Просмотров: 136
ಪುರಂದರ ದಾಸರು 8-Basic1-160-C
ರಾಗ - ಕಾನಡ ಆದಿತಾಳ
ನೀನ್ಯಾಕೊ ನಿನ್ನ ಹಂಗ್ಯಾಕೋ
ನಿನ್ನ ನಾಮದ ಬಲವೊಂದಿದಿದ್ದರೆ ಸಾಕೋ ॥ಪ॥
ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿಮೂಲಾ ಎಂಬೋ ನಾಮವೆ ಕಾಯ್ತೋ ॥1॥
ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನಾರಸಿಂಹಾ ಎಂಬೋ ನಾಮವೆ ಕಾಯ್ತೋ ॥2॥
ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬೋ ನಾಮವೆ ಕಾಯ್ತೋ ॥3॥
ಬಾಲೆಗೆ ಸಭೆಯಲ್ಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣಾ ಎಂಬೋ ನಾಮವೆ ಕಾಯ್ತೋ ॥4॥
ನಿನ್ನ ನಾಮಕೆ ಸರಿ ಕಾಣೆನು ಜಗದೀ
ಘನ್ನ ಮಹಿಮ ಸಿರಿ ಪುರಂದರ ವಿಠಲ ॥5॥
Доступные форматы для скачивания:
Скачать видео mp4
-
Информация по загрузке: