ಹೇಗಿರಬೇಕು ನಮ್ಮ ನಿತ್ಯದ ದಿನಚರಿ? |ಪರಂಪರಾ ಗುರುಕುಲದ ದಿನಚರಿ
Автор: Vishnugupta VishwaVidyaPeetham
Загружено: 2025-09-22
Просмотров: 1631
ಪರಂಪರಾ ಗುರುಕುಲದ ದಿನಚರಿ
ಜೀವನದಲ್ಲಿ ಪ್ರತಿಯೊಬ್ಬರೂ ಬಯಸುವಂತಹ ಆರೋಗ್ಯ ಮತ್ತು ನೆಮ್ಮದಿಯನ್ನು ಪಡೆದುಕೊಳ್ಳುವುದು ಸರಿಯಾದ ದಿನಚರಿಯ ಪಾಲನೆಯಿಂದ ಸಾಧ್ಯ ಎಂಬುದನ್ನು ನಮ್ಮ ಋಷಿ ಮಹರ್ಷಿಗಳು ತೋರಿಸಿಕೊಟ್ಟಿದ್ದಾರೆ. ಅಂತೆಯೇ ಸ್ವಸ್ಥ ಜೀವನಕ್ಕಾಗಿ ದಿನಚರಿಯೊಂದನ್ನು ಸರಿಯಾಗಿಸಿದರೆ ಸಾಕು ಎಂಬ ಶ್ರೀಸಂಸ್ಥಾನದವರ ಉಕ್ತಿಯಂತೆ ಗುರುಕುಲದಲ್ಲಿ ಉತ್ತಮ ದಿನಚರಿಯ ಪಾಲನೆಯಾಗುತ್ತಿದೆ.
~~~~~~~~~~~
ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್, ಅಶೋಕೆ, ಗೋಕರ್ಣ
ಹವ್ಯಕಮಹಾಮಂಡಲ ಟ್ರಸ್ಟ್(ನೋಂ.) ಶ್ರೀರಾಮಚಂದ್ರಾಪುರಮಠ ಇದರ ಪೋಷಿಸಲ್ಪಡುತ್ತಿರುವ
ಪರಂಪರಾ ಗುರುಕುಲ ಪರಿಚಯ
ಸಂಸ್ಕೃತ-ಸಂಸ್ಕೃತಿ ಮತ್ತು ಭಾರತೀಯ ವಿದ್ಯೆಕಲೆಗಳ ಉಳಿಸಿ ಬೆಳೆಸುವ ಸಲುವಾಗಿ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ ಹವ್ಯಕಮಹಾಮಂಡಲ ಟ್ರಸ್ಟ್(ನೋಂ.) ಶ್ರೀರಾಮಚಂದ್ರಾಪುರಮಠ ಇವರಿಂದ ಸ್ಥಾಪಿಸಲ್ಪಟ್ಟು ಪೋಷಿಸಲ್ಪಡುತ್ತಿರುವ ಗುರುಕುಲ ಇದಾಗಿದೆ.
8 ರಿಂದ 10 ವರ್ಷ ವಯಸ್ಸಿನ(5ನೇ ಅಥವಾ 6ನೇ ತರಗತಿಯ) ತ್ರಿಮತಸ್ಥ ಉಪನೀತ ವಟುಗಳಿಗೆ ಮತ್ತು ಬಾಲಕಿಯರಿಗೆ ಪ್ರವೇಶಾವಕಾಶ. ಆರುವರ್ಷಗಳ ಅಧ್ಯಯನ ಅವಧಿ.
1. ಮೂಲಸೋಪಾನ
2. ಅಂಕುರಸೋಪಾನ
3. ಸುಕಾಂಡ ಸೋಪಾನ
4. ಸುಶಾಖಾ ಸೋಪಾನ
5. ಸುಪುಷ್ಪ ಸೋಪಾನ
6. ಸುಫಲ ಸೋಪಾನ ಎಂದು ಆರು ತರಗತಿಗಳು.
• ಸಂಸ್ಕೃತಬಾಲಪಾಠ,ಇತಿಹಾಸ,ಕಾವ್ಯ,ವ್ಯಾಕರಣ, ಛಂದಸ್ಸು, ಅಲಂಕಾರಶಾಸ್ತ್ರ, ಧರ್ಮಶಾಸ್ತ್ರ, ಜ್ಯೌತಿಷಶಾಸ್ತ್ರ, ಯೋಗಶಾಸ್ತ್ರ, ಆಯುರ್ವೇದ, ತರ್ಕಶಾಸ್ತ್ರ, ಮೀಮಾಂಸಾಶಾಸ್ತ್ರ, ವೇದಾಂತಶಾಸ್ತ್ರಗಳ ಸಾಮಾನ್ಯ ಪರಿಚಯ.
• ಪ್ರತಿ ಆರುತಿಂಗಳಿಗೆ ಒಂದು ಶಾಸ್ತ್ರದ ಬೋಧನೆ, ಪರೀಕ್ಷೆ ಮತ್ತು ಪ್ರಮಾಣಪತ್ರಪ್ರದಾನ.
• ಬೋಧನಾ ಮಾಧ್ಯಮ ಸಂಸ್ಕೃತ.
• ಸಂಸ್ಕೃತ, ಕನ್ನಡ ಮತ್ತು ಆಂಗ್ಲಭಾಷೆಗಳ ಭಾಷಾಪ್ರೌಢಿಮೆ ಹೊಂದಲು ಪ್ರತ್ಯೇಕ ಭಾಷಾತರಗತಿಗಳು.
• ಸಂಸ್ಕೃತಭಾಷೆಯಲ್ಲಿ ಪಾರಂಪರಿಕ ಶಿಕ್ಷಣಪ್ರದಾನ.
• ಕನ್ನಡ ಭಾಷೆಯಲ್ಲಿ ಕನ್ನಡ ಸಾಹಿತ್ಯದ ಬೋಧನೆ.
• ಭಾರತೀಯವಾದ ದೃಶ್ಯ-ಸಂಗೀತ-ವಾದ್ಯಕಲೆಗಳ ಬೋಧನೆ.
• 5/6ನೇ ತರಗತಿಯಿಂದ ಆರಂಭಿಸಿ ಪದವಿಪೂರ್ವಶಿಕ್ಷಣದ ವರೆಗೆ ನವಯುಗಶಿಕ್ಷಣ.
• ಮೂರುಹಂತಗಳ ಪ್ರವೇಶಪ್ರಕ್ರಿಯೆಯ ಮೂಲಕವೇ ವಿದ್ಯಾರ್ಥಿಯ ಆಯ್ಕೆ.
ಸಂಪರ್ಕ ಸಂಖ್ಯೆ : 9482016929, 9901446855
Доступные форматы для скачивания:
Скачать видео mp4
-
Информация по загрузке: