365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets
Автор: Rangu Kasturi - Farming in Kannada
Загружено: 2025-10-04
Просмотров: 2243
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಒಂದು ಪುಟ್ಟ ಗ್ರಾಮ ತೀರ್ಥ ಎಂಬ ಹಳ್ಳಿಯ ಮಹಿಳೆಯರು 14 ಜನ ಸೇರಿಕೊಂಡು ನಿರ್ಮಿಸಿದ ಬೀಬಿ ಫಾತೀಮಾ ಸ್ವಸಹಾಯ ಸಂಘ ಇಂದು ಕರ್ನಾಟಕದ ಹೆಮ್ಮೆಯ ಸಂಘವಾಗಿ ಬೆಳೆದಿದೆ
UNDP Equator prize 2025 ವಿಶ್ವದ ವಿಶೇಷ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದ ನಮ್ಮ ಕರ್ನಾಟಕದ ಹೆಮ್ಮೆಯ ಮಹಿಳಾ ಸಂಘವಾಗಿದೆ
ಈ ಸಂಘವು ಸಹಜ ಸಮೃದ್ಧ ಎಂಬ NGO ಸಹಕಾರದೊಂದಿಗೆ ಮೊದಲಿಗೆ ಗ್ರಾಮದ ಮನೆ ಮನೆಗೆ ಹಿತ್ತಲಲ್ಲಿ ಕೈತೋಟ ನಿರ್ಮಿಸುವ ಮೂಲಕ ಪ್ರತಿಯೊಬ್ಬರೂ ತರಕಾರಿ ಬೆಳೆದು ತಾವು ತಿಂದು ಮಾರಾಟ ಮಾಡಲು ಸಹಾಯ ಮಾಡಿದೆ
ನಂತರ ಸಿರಿಧನ್ಯಗಳಿಗೆ ಒತ್ತು ಕೊಟ್ಟ ರೈತರ ಮನವೊಲಿಸಿ ಬೀಜಗಳ ವಿತರಣೆ ಮಾಡಿ ಹಲವಾರು ಏಕರೆಗಳಲ್ಲಿ ಸಿರಿಧಾನ್ಯಗಳ ಬೆಳೆಯಲು ಪ್ರೋತ್ಸಾಹ ನೀಡಿದೆ
ರೈತರು ಬೆಳೆದಂತಹ ಧಾನ್ಯಗಳನ್ನು ತಾವೇ ಖರೀದಿಸಿ ವಿಶೇಷ ಯಂತ್ರಗಳ ಮೂಲಕ ಅವುಗಳನ್ನ ಸಂಸ್ಕರಣೆ ಮಾಡಿ ಮೌಲ್ಯವರ್ಧನೆ ಕೂಡ ಮಾಡುತ್ತಾರೆ
ವಿಶೇಷವಾಗಿ ಸಿರಿಧಾನ್ಯಗಳ ರೊಟ್ಟಿ, ಶಾವಿಗೆ, ಚಕ್ಕುಲಿ, ಪೌಷ್ಟಿಕಾಂಶದ ಹಿಟ್ಟು, ಸಿರಿಧಾನ್ಯ ದೋಸೆ ಹಿಟ್ಟು ಹೀಗೆ ಹಲವಾರು ಬಗೆಯ ಪದಾರ್ಥಗಳನ್ನು ತಯಾರಿಸಿ ದೇವಧನ್ಯ ರೈತ ಉತ್ಪಾದಕರ ಕಂಪನಿ ಮೂಲಕ ಮಾರಾಟ ಮಾಡುತ್ತಿದ್ದಾರೆ
ಅಷ್ಟೇ ಅಲ್ಲದೆ 365 ಬಗೆಯ ನಶಿಸಿ ಹೋಗುತ್ತಿರುವ ಬೀಜಗಳನ್ನ ಸಂಗ್ರಹಿಸಿ ದೇಸಿ ಬೀಜ ಬ್ಯಾಂಕ್ ನಿರ್ಮಿಸಿ ರೈತರಿಗೆ ಸ್ಥಳೀಯ ದೇಸಿ ಬೀಜಗಳನ್ನು ವಿತರಣೆ ಮಾಡುತ್ತಿದ್ದಾರೆ
ಜೊತೆಗೆ ಹಲವಾರು ಮೇಳ ಮತ್ತು ಕಾರ್ಯಕ್ರಮಗಳಲ್ಲಿ ಸಿರಿಧಾನ್ಯಗಳ ಊಟ ತಯಾರಿಸಿ ಜನರಿಗೆ ಆರೋಗ್ಯಕರ ಊಟ ನೀಡುವಲ್ಲಿ ಜನಪ್ರಿಯರಾಗಿದ್ದಾರೆ
ಇವರ ಈ ಅಧ್ಬುತ ಕಾರ್ಯಕ್ಕೆ ವಿಶ್ವ ಪ್ರಶಸ್ತಿ ದೊರಕಿದ್ದು ನಮ್ಮ ಕರ್ನಾಟಕದ ಹೆಮ್ಮೆಯ ಸಂಗತಿ ಇಂತಹ ವಿಶೇಷ ಮಹಿಳಾಮಣಿಗಳನ್ನ ಭೇಟಿಯಾಗಿದ್ದು ರಂಗು ಕಸ್ತೂರಿ ಚಾನಲ್ ನ ಭಾಗ್ಯ ಅಂತ ಭಾವಿಸುತ್ತೇನೆ....!
===============
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಬೀಬಿ ಫಾತೀಮಾ ಸ್ವಸಹಾಯ ಸಂಘ
ತೀರ್ಥ ಗ್ರಾಮ
ತಾ. ಕುಂದಗೋಳ
ಜಿ. ಧಾರವಾಡ
ಮೊ. 6364374058
===============
365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets
===============
#rangukasturi #desiseedbank #desiseeds #vegetableseeds #millets #nativeseeds #seeds #seedbank #millet #desi #organicseeds #agriculture #farming #organicmillets
Доступные форматы для скачивания:
Скачать видео mp4
-
Информация по загрузке: