ಕನ್ನಡದಲ್ಲಿ,ಮಾಮುನಿತನಿಯನ್.ಆಂಡಾಳ್ಆಣತಿ, ತಿರುಪ್ಪಾವುತನಿಯನ್. ಡಿಸ್ಕ್ರಿಪ್ಶನ್ ನಲ್ಲಿ ಹಾಡುಇದೆ. ಅನುವಾದ ಅನ್ನಪೂರ್ಣ
Автор: poornashri srushti
Загружено: 2025-12-06
Просмотров: 189
ಮಣವಾಳ ಮಾಮುನಿ ತನಿಯನ್*
ಶ್ರೀಶೈಲಾಚಾರ್ಯರು ದಯೆಗೆ ಪಾತ್ರರು
ಜ್ಞಾನ ಭಕ್ತಿ ಪರಿಪೂರ್ಣರೂ
ಯತಿರಾಜರಿಗೆ ಪ್ರೀತಿ ಪಾತ್ರರು
ಮಣವಾಳ ಮಾಮುನಿಗೆ ವಂದನೆಯೂ//
ಕೂರತ್ತಳ್ವಾರ್
ಲಕ್ಷ್ಮೀನಾಯಕ ನಾರಾಯಣ ಶ್ರೀನಾಥ
ಮುನಿಗಳು ಶ್ರೀ ಅಳವಂದಾರು
ಗುರು ಪರಂಪರಾಚಾರ್ಯರ ಪಂಕ್ತಿಗೆ
ಸೇವಿಸುವೆವು ಸರ್ವಕಾಲಕೇ//
ಸರ್ವೇಶ್ವರರ ಸಿರಿ ಚರಣವಲ್ಲದೆ
ಇತರ ವಿಷಯಗಳ ಕ್ಷುಲ್ಲಕವಾಗಿ
ತಿಳಿದಿಹ ಪೂಜ್ಯರು ರಾಮಾನುಜರ
ಸಿರಿಪಾದಗಳಾ ಸೇವಿಸುವಾ//
ಆಳವ
ಜನನೀ ಜನಕರು ಸ್ತ್ರೀಯರು ಪುರುಷರು
ವಂಶದ ಜನರು ನೇಮದಿಂದಲಿ
ಆಳ್ವಾರರ ಸಿರಿಪಾದದ್ವಯವಹ
ಶಠಗೋಪರಿಗೆ ವಂದನೆಯು//
ಶರಣಾಗತರು ಮನೋಹರವಾದ
ಪಾರಿಜಾತದಿ ಪೂಜಿಸುವಾ
ಶ್ರೀ ಶಠಗೋಪರ ಪಾದಯುಗಳವ
ಶಿರದಿಂದಲೀ ಸೇವಿಸುವಾ//
ಪರಾಶರ್ ಭಟ್ಟರ್
ಪೂದತ್ತಾಳ್ವಾರ್ ಪೊಯ್ ಗೈಯ್ಯಾರರ
ಪೇಯಾಳ್ವಾರು ಪೆರಿಯಾಳ್ವಾರರ
ತಿರುಮಳಿ ಶೈಯ್ಯಾಳ್ವಾರ್ ಕುಲಶೇಖರರಾ
ತೊಂಡರಡಿಪ್ಪಾಯಾಳ್ವಾರರ//
ತಿರುಮಂಗೈಯ್ಯಾಳ್ವಾರ್ ನಮ್ಮಳ್ವಾರರ
ಪೂಜ್ಯರಿಹ ಯತಿರಾಜರರಾ
ನಿರತವಾಗಿ ಸೇವಿಸುವವನು
ಸಿರಿಪಾದಗಳ ನಮಿಸುತಲೀ//
ಆಂಡಾಳ್ ತಿರು ನಕ್ಷತ್ರ
ಕರ್ಕಾಟಕ ಪೂರ್ವ ಫಲ್ಗುಣಿ
ತುಳಲಸೀ ಕಾನನದಲಿ ಜನಿಸಿರುವ
ಪಾಂಡ್ಯದ ವಿಶ್ವಂಭರ ಗೋದೆಗೆ
ವಂದಿಪೆ ಶ್ರೀ..ರಂಗನಾಯಕಿಗೆ//
ಆಂಡಾಳಮ್ಮ ಆಣತಿ ಗೈದ ಸಿರಿಗಾನ
ಗೋದಾದೇವಿ ಕೋರಿ ಭಜಿಸುವಾ
ಗೋಕುಲನಾಥನ ಚರಿತೆಯನು
ಪೆರಿಯಾಳ್ವಾರರ ಮುದ್ದಿನ ಕುವರಿ
ಹಾಡಿದ ಹಾಡನು ಕೇಳೆಬನ್ನಿ//
ಗೋಕುಲ ವಾಸನ ಗೋಪಿಕ ಲೋಲನ
ಕೋರಿ ಭಜಿಸುವ ಬನ್ನಿರೈ
ಗೋದಾದೇವಿ ಕೋರಿಕೆ ನೀಡಿದ
ರಂಗನಾಥನ ಗಾನವನೂ//
ಕ್ಷೀರಸಾಗರಶಾಯಿಗೆ ಲಕ್ಷ್ಮೀ
ಪಾದಗಳನ್ನು ಒತ್ತುತ್ತಿರಲು
ಜನನ ಮರಣ ರಾಹಿತ್ಯಕೆ ಎಂದು
ಉಪಾಯವನ್ನು ಕೇಳಿರಲು//
ಪನ್ನಗ ಶಾಯಿ ಬುವಿಯ ಕುವರಿಗೆ
ಪ್ರಿಯ ವಚನಗಳಾ ಇಂತೆಂದಾ
ತಿರುತ್ತುಳಾಯಿ ಪುಷ್ಪಮಾಲ
ಕೈಂಕರ್ಯವು ಎನಗೆ ಶ್ರೇಷ್ಠವು//
ಈ ರೀತಿಯಲಿ ಭಕ್ತರೆಲ್ಲರು
ಶ್ರದ್ದೆಯಿಂ ನನ್ನೇ ಸೇವಿಸುತಾ
ಪ್ರಕೃತಿ ಬಂಧದಿ ಬಿಡುಗಡೆ ಹೊಂದಿ
ಪರಮ ಪದವನು ಹೊಂದುವರು//
ತಿರುಪ್ಪಾವು ತನಿಯನ್
ಆಂಡಾಳಮ್ಮ ಆಣತಿಯಿತ್ತಾ
ತಿರುಪ್ಪಾವೆನೆ ಪ್ರಬಂಧವು
ಭಾಗವತೋತ್ತಮರೆಲ್ಲರೂ ಸೇರಿ
ಪರಂಧಾಮನಾ ಭಜಿಸುತಿರಿ//
ರುಕ್ಮಿಣಿ ದೇವಿಯ ಜೊತೆಗೂಡಿ
ಕೃಷ್ಣ ಸ್ವಾಮಿಯ ಜಾಗರಗೊಳಿಸಿ
ದಾಸ್ಯಗೊಳ್ಳುವ ಆಸಕ್ತಿಯವಳ
ಶ್ರೀ ಆಂಡಾಳಿಗೆ ವಂದನೆಯು//
ಹಂಸ ನಡಿಗೆಯ ಆಂಡಾಳಮ್ಮ
ಅನುಸಂಧಾನ ರೂಪದಲೀ
ಗಾಯನ ರೂಪದಿ ಪ್ರಸಾದಿಸಿದಾ
ಕುಸುಮಮಾಲೆಯ ಧರಿಸಿದಳು//
ವಿಲ್ಲಿ ಪುತ್ತೂರಲಿ ಅವತರಿಸಿರುವಾ
ಶೂಡಿಕೊಡುತ್ತನಾಚರರೂ
ರಂಗನಾಥನಿಗೆ ಸಮರ್ಪಿಸಿದಾ
ಗೋದಾಗಾನವ ಮಾಡುತಿರಿ//
ತಕ್ಕ ವಯಸ್ಸಿನ ಆಂಡಾಳಮ್ಮ
ತನಗೆ ಪತಿಯು ರಂಗನೆಂದು
ತಾನು ಧರಿಸಿದ ಪ್ರೇಮ ಮಾಲೆಯ
ರಂಗನ ಕೊರಳಿಗೆ ಹಾಕಿದಳು//
ಶ್ಯಾಮಸುಂದರನ ವಿವಾಹವಾಗಲು
ಶ್ರೀನಿವಾಸನ ಪ್ರಾರ್ಥಿಸುತಾ
ದಿನ ಮೂವತ್ತು ಸಖಿಯರ ಕೂಡಿ
ಉತ್ತಮ ವ್ರತವನು ಮಾಡಿದಳು//
ಬಂಗಾರು ಪೇಟೆಯ ಶ್ರೀಮತಿ
ರಾಜಲಕ್ಷ್ಮಮ್ಮನವರು ತೆಲುಗಿನಲ್ಲಿ
ರಚಿಸಿದ್ದುದರ ಕನ್ನಡ
ಅನುವಾದ ಹಾಗೂ ಗಾಯನ
ಅನ್ನಪೂರ್ಣ ಹೇಮಚಂದ್ರ.
Доступные форматы для скачивания:
Скачать видео mp4
-
Информация по загрузке: