Aakki aarisuvaaga (Bhavageethe) - ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
Автор: olavinahaadu
Загружено: 2013-05-02
Просмотров: 550910
ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ
ಸಂಗ್ರಹ - ಗೀತ ಮಾಧುರಿ
ರಚನೆ - ಕೆ. ಎಸ್. ನರಸಿಂಹ ಸ್ವಾಮಿ
Aakki aarisuvaaga (Bhavageethe)
Album - gIta maadhuri
Lyrics - K.S. Narasimha Swamy
ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ
ಶೃಂಗಾರಕಾಣದಾ ಹೆರಳು
ಬಂಗಾರವಿಲ್ಲದಾ ಬೆರಳು
ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚುಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳು
ಕಲ್ಲಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನ್ನುವಾ ಬಳೆಯ ಸದ್ದು
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣುಬಿದ್ದು ಬಂಗಾರವಿಲ್ಲದ ಬೆರಳು
ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೇ ಇವಳು
ಚಿತ್ರದಲಿ ತಂದಂತೆ ಇಹಳು
ಬೇಸರಿಯ ಕಿರಿಮುತ್ತು ನುಚ್ಚಿನಲಿ ನುಚ್ಚಿರಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದಾ ಬೆರಳು
-ಕೆ ಎಸ್ ನ
To Buy DVD : http://www.totalkannada.com/
Доступные форматы для скачивания:
Скачать видео mp4
-
Информация по загрузке: