VISHISHTA RUCHI

ಸಮಸ್ತ ಕನ್ನಡಿಗರಿಗೆ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿ ತಂಡದ ನಮಸ್ಕಾರಗಳು,
"ಅಮ್ಮನ ಕೈ ರುಚಿ" ಅನ್ನುವ ಸಂಚಿಕೆಗಳ ಮೂಲಕ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಪಾರಂಪರಿಕ, ಶುಚಿ-ರುಚಿ ಅಡುಗೆಗಳನ್ನು ತೊರಿಸಲಿದ್ದೇವೆ.
"ತಿಂಡಿ ಆಯ್ತಾ?!" ಎನ್ನುವ ಎಪಿಸೋಡ್ ಗಳ ಮೂಲಕ ನಮ್ಮ ರಾಜ್ಯದ ಹೋಟೆಲ್ ಗಳನ್ನು ತಮಗೆ ಪರಿಚಯಿಸಲಿದ್ದೇವೆ.
ನಮ್ಮ ಹಸಿವನ್ನು ನೀಗಿಸುವ ಜೊತೆ ನಮ್ಮನ್ನು ಸಂತೃಪ್ತಿಗೊಳಿಸುವ ವಿಶೇಷ ಹೋಟೆಲ್ಗಳ ದರ್ಶನ ನಮ್ಮ "ಊಟ ತಯಾರಿದೆ" ಎಂಬ ಎಪಿಸೋಡ್ ಗಳಲ್ಲಿ ತಾವು ಕಾಣಬಹುದು.
ಆಗೊಮ್ಮೆ ಈಗೊಮ್ಮೆ ರುಚಿಕರವಾದ ಚಾಟ್ಸ್ಗಳನ್ನು ಸವಿಸುವ ಜವಾಬ್ದಾರಿ ನಮ್ಮ"ಚಾಟ್ಸ್ ಅಡ್ಡಾ" ಸಂಚಿಕೆಗಳದ್ದು.
ರಾಜ್ಯದ ವಿಭಿನ್ನ ಡಾಬಾಗಳನ್ನು ತಮ್ಮ ಅಂಗೈ ಮೇಲೆ ತಂದು ಕೂರಿಸಲಿವೆ ನಮ್ಮ "ಡಾಬಾ ಸ್ಪೆಷಲ್" ಸಂಚಿಕೆಗಳು.
ಮದುವೆ ಶುಭ ಸಮಾರಂಭಗಳ ಅಡುಗೆಗಳನ್ನು ನಮ್ಮ "ಭಟ್ಟರ ಸ್ಪೆಷಲ್" ನಲ್ಲಿ ಉಣಬಡಿಸಲಾಗುತ್ತೆ.
ಬಾಯಲ್ಲಿ ನೀರೂರಿಸುವ ಬೇಕ್ರಿಗಳ ಪರೇಡ್ ನಮ್ಮ "ಇನ್ನೇನ್ ಬೇಕ್ರೀ?!" ಯಲ್ಲಿ.
ಹೀಗೆ ಒಂದು ವಿಭಿನ್ನ ಪ್ರಯತ್ನ ನಿಮ್ಮ ಈ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯದ್ದು.
ಸಹೃದಯಿ ಕನ್ನಡಿಗರ ಆಶಿರ್ವಾದದ ನಿರೀಕ್ಷೆಯಲ್ಲಿರುವೆವು, Like, Subscribe, Share ಮಾಡಿ ನಮ್ಮನ್ನು ಬೆಂಬಲಿಸಿ.