ನುಡಿಪ್ರಣತಿ - ಅಲ್ಲೊಂದು ಮನೆ;ಕವಿತಾ ವಾಚನ -ಚಿದಂಬರ ಕಾಳಮಂಜಿ; ಕವಿತೆ: ಸಮುದ್ಯತಾ ವೆಂಕಟರಾಮು
Автор: NammaneSangeethaPranathi-ChidambaraKalamanji
Загружено: 2025-02-27
Просмотров: 277
ಕವಿತೆ
ಅಲ್ಲೊಂದು ಮನೆ
ಬರೆದವರು
ಸಮುದ್ಯತಾ ವೆಂಕಟರಾಮು
*************************
ಅಲ್ಲೊಂದು ಮನೆ
ಎಷ್ಟೊಂದು ಮುದ
ಸದಾ ತೆರೆದ ಕಿಟಕಿ ಬಾಗಿಲು
ಬೆಳಕು ಗಾಳಿಗಷ್ಟೇ ಅಲ್ಲ
ಒಳಗೆ ಬರುವವರಿಗೂ
ಗೋಡೆಯೆಂದರೆ ಇದ್ದೂ ಇಲ್ಲದಂತೆ
ನಡುಮನೆಯ ದಪ್ಪನೆಯ ಬಾಗಿಲಿಗೆ
ಮಕ್ಕಳು ತನ್ನ ಹಿಂದಡಗಿ
ಆಡುವುದೆಂದರೆ ಆನಂದ
ಹಾಗೇ ಎಂದಿನಿಂದಲೋ ಗಪ್ಪಾಗಿ ಕೂತ
ದೇವರಕಪ್ಪೆಯನ್ನೂ
ಬಚ್ಚಿಡುವುದೂ ಸಹ
ಸಾರ್ಥಕದ ಭಾವ
ಗದ್ದಲ ಕೇಕೆಗಳಿಗೆ
ಮಾಡಿನ ಹೆಂಚುಗಳೇ ಹಾರಿಹೋಗಿದ್ದವೇನೋ!
ಮೊದಲ ಮಳೆಗೆ ಹನಿಗಳೆಲ್ಲ ಒಳಗೇ!
ಬೀಳುವ ನೀರಿಗೆ ಬಾಯೊಡ್ಡಿ ಕೂತ
ಪಾತ್ರೆ ಕಡಾಯಿಗಳು
ಹೊರಗೆ ನಿಂತ ಮಳೆ
ಹಲಸಿನ ಮರದಿಂದ
ಲಯಬದ್ಧ ವಾಗಿ ತೊಟ್ಟಿಕ್ಕುವ
ಒಂದೊಂದೇ ಹನಿಗಳು
ನಿಧಾನವಾಗಿ ಶಬ್ದ ಮರೆಯಾಗಿ
ಕಾಲವೆಂಬುದು ಜೇಡವಾಗಿ
ನೇಯ್ದ ಬಲೆ ದೊಡ್ಡದಾಗಿ
ಇಡೀ ಮನೆಯನಾವರಿಸಿ
ಈಗ ಮುಚ್ಚಿದ ಕಿಟಕಿ ಬಾಗಿಲುಗಳು
ಆಕಳಿಸಿ ಆಕಳಿಸಿ
ತಾನೇ ಕತ್ತಲಾಗಿ
ಹೊದ್ದು ಮಲಗಿದ ಬೆಳಕು!
ತಾನೊಂದು ಸುಡುಗಾಡು
ಯಾವಾಗ ಈ ಬೆಳಕೆಂಬುದು
ಬಂದು ತನ್ನ ತಬ್ಬುತ್ತದೇನೋ
ಎಂದು ಹಲವರಿಯುವ ಕತ್ತಲೆ
Доступные форматы для скачивания:
Скачать видео mp4
-
Информация по загрузке: