ಸಂಗೀತ ಪ್ರಣತಿ#52- ನೀನೊಬ್ಬನೇ ಬಾರೋ -ಎಚ್.ಎಸ್. ವೆಂಕಟೇಶಮೂರ್ತಿ -ನಮ್ರತಾ ಪ್ರಸಾದ್ -ಚಿದಂಬರ ಕಾಳಮಂಜಿ
Автор: NammaneSangeethaPranathi-ChidambaraKalamanji
Загружено: 2020-10-11
Просмотров: 16978
ನಮ್ಮನೆ ಸಂಗೀತ ಪ್ರಣತಿ
{ಚಿದಂಬರ ಕಾಳಮಂಜಿ ಸಾರಥ್ಯದ ಸುಗಮ ಸಂಗೀತ ಬಳಗ }
***********************
52 ನೇ ಭಾವಗೀತೆ
**************************************
ನೀನೊಬ್ಬನೇ ಬಾರೋ , ಜೊತೆಗೆ ತರಬೇಡ ಕುಲದ ಹೆಸರು
**********************************************
ಪ್ರೇಮಿಯೊಬ್ಬಳು ತನ್ನ ಪ್ರಿಯಕರನನ್ನು ಬಾ, ಜೀವನ ಸಂಗಾತಿಯಾಗಿ ಬಾ ಅಂತ ಆಹ್ವಾನಿಸುತ್ತಾ ಇದ್ದಾಳೆ. ಆದರೆ ಸ್ವಲ್ಪ ಆತಂಕದಲ್ಲಿದ್ದಾಳೆ.
ಎಲ್ಲಿ ಆತನ ಹಿನ್ನೆಲೆ ( ಕುಲ, ಜಾತಿ, ಸಂಪತ್ತು ) ಅಡ್ಡ ಬರುತ್ತೋ ಅನ್ನುವ ಆತಂಕ ಮನದಲ್ಲಿ.
ಶುದ್ಧ ಪ್ರೀತಿಯೊಂದೇ ಸಾಕು - ಇದು ಆಕೆಯ ಹಂಬಲ
***************************************
ಕವಿತೆ
ಡಾ. ಎಚ್.ಎಸ್. ವೆಂಕಟೇಶಮೂರ್ತಿ
ಸಂಗೀತ ವಿನ್ಯಾಸ
ಚಿದಂಬರ ಕಾಳಮಂಜಿ
ಗಾಯನ
ನಮ್ರತಾ ಪ್ರಸಾದ್
*****************
ನೀನೊಬ್ಬನೇ ಬಾರೋ
ಜೊತೆಗೆ ಕರೆತರಬೇಡ
ಕಹಿ ನೆನಪನೂ
ಕೆಂಗುಲಾಬಿಯ ನಡುವೆ
ಯಾರು ತರುವರೋ ಹೇಳೋ
ಮುಳ್ಳುಗಳನು
------------------------------
ನೀನೊಬ್ಬನೇ ಬಾರೋ
ಜೊತೆಗೆ ತರಬೇಡ ಕುಲದ ಹೆಸರು
ನೀನೊಬ್ಬ ಬಾ ಸಾಕು
ನೀರ ತರುವರು ಮತ್ತೆ ಹೊತ್ತು ತರುವರೋ ಹೇಳೋ
ತಳದ ಕೆಸರು
--------------------------------
ನೀನೊಬ್ಬನೇ ಬಾರೋ
ನನಗೆ ಬೇಕಾಗಿಲ್ಲ ಬೇರೆ ಗೊಡವೆ
ಹುಟ್ಟುವಾಗಲೇ ಯಾರು ತೊಟ್ಟು ಬಂದರೋ ಹೇಳೋ
ವಸ್ತ್ರ ಒಡವೆ
ನೀನೊಬ್ಬನೇ ಬಾರೋ
---------------------------------
ನೀನೊಬ್ಬ ಬಾ ಸಾಕು
ನನಗೆ ನೀನೇ ಬೇಕು , ಅಷ್ಟು ಸಾಕು
ನಾವೆಂಬ ನಾವೆಗೆ
ನಾವೇ ನಾವಿಕರಾಗಿ
ತೊರೆಯನ್ನು ಹಾಯಬೇಕು
***************************
Nammane Sangeetha Pranathi
Sangeetha Pranathi #52
************************
Neenobbane Baaro
***************
Poet
Dr.H.S.Venkatesha Murthy
Music design
Chidambara Kalamanji
Singer
Namratha Prasad
******************
Доступные форматы для скачивания:
Скачать видео mp4
-
Информация по загрузке: