ಸಂಕ್ರಾಂತಿ ವಿಶೇಷ ಖಾರ ಪೊಂಗಲ್ | Sankranthi Special Khara Pongal | Khara Pongal | Sankranthi recipes
Автор: YashodaGanga PS Loka
Загружено: 2026-01-13
Просмотров: 66
ಸಂಕ್ರಾಂತಿ ವಿಶೇಷ ಖಾರ ಪೊಂಗಲ್ | Sankranthi Special Khara Pongal | Khara Pongal | Sankranthi recipes
ಖಾರ ಪೊಂಗಲ್ ಮಾಡಲು 1 ಕಪ್ ಅಕ್ಕಿ 1 ಕಪ್ ಹೆಸರುಬೇಳೆ ಎರಡನ್ನು 2 ಸಲ ತೊಳೆದಿಡಿ ಈಗ ಕುಕ್ಕರ್ ಗೆ 1 ಟೀ ಸ್ಪೂನ್ ತುಪ್ಪ ಹಾಕಿ ತುಪ್ಪ ಕರಗಿದ ನಂತರ ತೊಳೆದಿಟ್ಟ ಅಕ್ಕಿ, ಹೆಸರುಬೇಳೆ ಸೇರಿಸಿ ಸಣ್ಣ ಉರಿಯಲ್ಲಿ 2 ನಿಮಿಷ ಹುರಿಯಿರಿ ನಂತರ 6 ಕಪ್ ನೀರು ಸೇರಿಸಿ ಲಿಡ್ ಮುಚ್ಚಿ 3 ವಿಷಲ್ ಕೂಗಿಸಿ.ನಂತರ ಒಗ್ಗರಣೆಗೆ ಪಾತ್ರೆಗೆ 3 ಟೀ ಸ್ಪೂನ್ ಎಣ್ಣೆ,1 ಟೀ ಸ್ಪೂನ್ ತುಪ್ಪ ಹಾಕಿ ಕಾದ ನಂತರ 1 ಟೀ ಸ್ಪೂನ್ ಜೀರಿಗೆ ಅರ್ಧ ಟೀ ಸ್ಪೂನ್ ಮೆಣಸಿನ ಕಾಳು ಹಾಕಿ 3 ಹಸಿರು ಮೆಣಸಿನಕಾಯಿ ಕಟ್ ಮಾಡಿ ಸೇರಿಸಿ ಉರಿಯನ್ನು ಸಣ್ಣದಾಗಿ ಇಟ್ಟುಕೊಳ್ಳಿ 10 ಗೋಡಂಬಿ ಹಾಕಿ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಶುಂಠಿ ತುರಿದು ಸೇರಿಸಿ ಸ್ವಲ್ಪ ಅರಿಶಿನ ಪುಡಿ ಹಾಕಿ ಹಾಗೂ ಸ್ವಲ್ಪ ಇಂಗು ಸೇರಿಸಿ ಹುರಿಯಿರಿ .ಈಗ ಕುಕ್ಕರ್ ಪ್ರೆಷರ್ ಹೋದ ನಂತರ ಬೆಂದಿರುವ ಅಕ್ಕಿ, ಹೆಸರುಬೇಳೆಗೆ ತಯಾರಿಸಿಟ್ಟ ಒಗ್ಗರಣೆ ಸೇರಿಸಿ ಕಟ್ ಮಾಡಿದ ಕೊತ್ತಂಬರಿ ಸೊಪ್ಪು ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಕರವಾದ, ಆರೋಗ್ಯಕರವಾದ ಖಾರ ಪೊಂಗಲ್ ರೆಡಿ ಸರ್ವ್ ಮಾಡಿ.
Доступные форматы для скачивания:
Скачать видео mp4
-
Информация по загрузке: