ಕೋಟಿ ಬಾಳುವ ಎತ್ತು,ಈತನಿಗ್ಯಾರು ಸಾಟಿ ಇಲ್ಲ ; ಮಹಾರಾಷ್ಟ್ರಕ್ಕೆ ಇದೆ CM ನೋಡಿ ಕರ್ನಾಟಕದ ಹೆಲಿಕಾಪ್ಟರ್
Автор: UK9 NEWS KANNADA LIVE
Загружено: 2025-02-16
Просмотров: 72774
BGM :STORY
ಕೋಟಿ ಬಾಳುವ ಎತ್ತು,ಈತನಿಗ್ಯಾರು ಸಾಟಿ ಇಲ್ಲ ;*
*ಮಹಾರಾಷ್ಟ್ರಕ್ಕೆ ಇದೆ CM ನೋಡಿ ಕರ್ನಾಟಕದ ಹೆಲಿಕಾಪ್ಟರ್
ಇದು ಕರ್ನಾಟಕಕ್ಕೆ ಕೀರ್ತಿ ತಂದ ಎತ್ತು,ಮಹಾರಾಷ್ಟ್ರದ ಓಟದ ಮೈದಾನದಲ್ಲೂ ಕರ್ನಾಟಕದ ಈ ಎತ್ತಿಗೆ ಭಾರಿ ಡಿಮ್ಯಾಂಡ್ ಇದೆ. ಒಬ್ಬ ಸೆಲೆಬ್ರೇಟಿಗೆ ಫ್ಯಾನ್ ಫಾಲೋವರ್ ಇರ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಈ ಎತ್ತಿಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನ ಪ್ಯಾನ್ ಪೋಲೋವರ್ ಇದ್ದಾರೆ ಅಂದ್ರೆ ನಂಬ್ತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ...
ಹೌದು.
ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನ ಸಭಾ ವ್ಯಾಪ್ತಿಯ ಸಿರೂರು ಅನ್ನೋ ಪುಟ್ಟ ಗ್ರಾಮದ ರೈತನ ಬದುಕು ಬದಲಾಯಿಸಿದ ಎತ್ತಿನ ಸ್ಟೋರಿ ಇದು
ರೈತ ಬಾಳು ಹಜಾರೆ ಅವರ ಪ್ರೀತಿಯ ಎತ್ತು ಮಹಾರಾಷ್ಟ್ರ ಕರ್ನಾಟಕದ ಓಟದ ಮೈದಾನದಲ್ಲಿ ಬರೋಬ್ಬರಿ 105 ಬಾರಿ ಮೊದಲ ಬಹುಮಾನ ಗೆಲ್ಲುವ ಮೂಲಕ ಕೋಟಿ ಒಡೆಯನಾಗಿ ಧಾಪುಗಾಲು ಇಟ್ಟಿದೆ.
ಓಟದ ಮೈದಾನದಲ್ಲಿ ಗಾಳಿಯ ವೇಗದಂತೆ ಓಡಬಲ್ಲ ಈ ಎತ್ತಿಗೆ ಅಭಿಮಾನಿಗಳು ಹೆಲಿಕ್ಯಾಪ್ಟರ್ ಎಂಬ ಹೆಸರಿನಿಂದ ಕರೆಯುತ್ತಾರೆ. ಈಗಾಗಲೆ, ಟ್ರಾಕ್ಟರ್, ಬೈಕ್,ಎರಡು ಬುಲೆಟ್ ಸೇರಿ, ಥಾರ್ ವಾಹನ ದಂತ ದುಬಾರಿ ಬಹುಮಾನ ತನ್ನ ಮೂಡಿಗೆರಿಸಿಕೊಂಡ ಹೆಲಿಕ್ಯಾಪ್ಟರ್ ಎತ್ತು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಕೇಸರಿ ಎಂಬ ಬಿರುದು ಪಡೆದು ಕನ್ನಡಿಗರಿಗೆ ಹೆಮ್ಮೆ ತಂದಿದೆ.
ಮೂಲತಃ ಅಥಣಿ ತಾಲೂಕಿನ ಮಾಯನಟ್ಟಿ ಗ್ರಾಮದ ರೈತರಿಂದ 6.5 ಲಕ್ಷ ರೂಪಾಯಿಗೆ ಖರೀದಿಸಿದ ರೈತ ಬಾಳು ಹಜಾರೆ ಎತ್ತಿಗೆ ಪ್ರತಿನಿತ್ಯ ತಾಲಿಮು ನೀಡಿ ಜಾತ್ರೆಗಳಲ್ಲಿ ಸಣ್ಣ-ಪುಟ್ಟ ಶರ್ಯತ್ತು ಸ್ಪರ್ಧೆಗಳಲ್ಲಿ ಭಾಗಿಯಾಗಿ ಮೊದಲ ಬಹುಮಾನ ಪಡೆಯುತ್ತಾ ದೊಡ್ಡ ಮೈದಾನಗಳಲ್ಲಿ (1 ಲಕ್ಷದಿಂದ 20 ಲಕ್ಷದ) ಸ್ಪರ್ಧೆಗೆ ಇಳಿದು ಪ್ರಥಮ ಬಹುಮಾನ ಗೆಲ್ಲುವ ಮೂಲಕ ಕೋಟಿ ಕೋಟಿ ಬಹುಮಾನ ಬಾಚಿದೆ.
ಈ ಎತ್ತಿನ ಆಗಮನದಿಂದ ರೈತನ ಕುಟುಂಬ ಆರ್ಥಿಕವಾಗಿ ಸಬಲಗೊಂಡಿದೆ,ಹೇಲಿಕ್ಯಾಪ್ಟರ್ ಮೈದಾನದಲ್ಲಿ ಓಟಕ್ಕೆ ನಿಂತರೆ ಲಕ್ಷಾಂತರ ಜನ ಇತನ ಓಟದ ಸ್ಪರ್ಧೆ ನೋಡಲು ದೂರದ ಊರಿಗೆ ಸಾಗುತ್ತಾರೆ. ಕರ್ನಾಟಕ ಮಹಾರಾಷ್ಟ್ರದಲ್ಲೂ ಈ ಎತ್ತು ಲಕ್ಷಾಂತರ ಅಭಿಮಾನಿಗಳ ಮನ ಗೆದ್ದು ಕನ್ನಡದ ಕೀರ್ತಿ ಹೆಚ್ಚಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಬೈಟ್ : ಬಾಳು ಹಜಾರೆ.. ರೈತ
Доступные форматы для скачивания:
Скачать видео mp4
-
Информация по загрузке: